ಶೇ.21ರಷ್ಟು ಮಕ್ಕಳಲ್ಲಿ ಬೊಜ್ಜು-ತೂಕ ಸಮಸ್ಯೆ: ಜಂಕ್ ಫುಡ್ ನಿಷೇಧಕ್ಕೆ ಆಗ್ರಹ

Update: 2018-12-12 17:14 GMT

ಬೆಂಗಳೂರು, ಡಿ.12: ರಾಜ್ಯ ರಾಜಧಾನಿಯಲ್ಲೇ ಶೇ.21ರಷ್ಟು ಮಕ್ಕಳು ಬೊಜ್ಜು-ತೂಕ ಸಮಸ್ಯೆಗಳನ್ನು ಎದುರಿಸುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದ್ದು, ಶೇ.9 ರಷ್ಟು ಬೊಜ್ಜು ಹಾಗೂ ಶೇ.12.7 ರಷ್ಟು ಅತಿಯಾದ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಬುಧವಾರ ನಗರದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರೈನ್‌ಬೋ ಚಿಲ್ಡ್ರನ್ ಆಸ್ಪತ್ರೆಯ ಉಪಾಧ್ಯಕ್ಷ ನೀರಜ್ ಲಾಲ್ ಮಾತನಾಡಿ, ಸಮತೋಲನ ಆಹಾರದ ಕೊರತೆ (ಅತಿಹೆಚ್ಚು ಕ್ಯಾಲೋರಿ) ಮುಖ್ಯ ಕಾರಣವಾಗಿದ್ದು, ಶಾಲಾ ಆವರಣದಲ್ಲಿ ಜಂಕ್ ಫುಡ್ ನಿಷೇಧಿಸಲು ಸಂಬಂಧಪಟ್ಟ ನಿಯಂತ್ರಣ ಸಂಸ್ಥೆಗಳು ನಿರ್ದೇಶನ ನೀಡಿದರೂ ಮಕ್ಕಳು ಜಂಕ್ ಫುಡ್ ಸೇವಿಸುತ್ತಿದ್ದಾರೆ. ಅಲ್ಲದೆ, ಬಹಳಷ್ಟು ಮಕ್ಕಳು ಕಡಿಮೆ ಹಾಗೂ ದೈಹಿಕ ಚಟುವಟಿಕೆಯೇ ಇಲ್ಲದೆ, ಇಂತಹ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ವೃದ್ಧಿಸುತ್ತಿರುವ ಜನಸಂಖ್ಯೆ 1.12 ಕೋಟಿ ಮುಟ್ಟಿದ್ದು, 30 ಲಕ್ಷ ಮಕ್ಕಳೇ ಇದ್ದಾರೆ. ಇವರಲ್ಲಿ ಮೂರನೇ ಎರಡರಷ್ಟು ಮಕ್ಕಳು 4500 ಕ್ಕೂ ಹೆಚ್ಚು ಶಾಲೆಗಳಿಗೆ ಹೋಗುತ್ತಿದ್ದು, ಅವುಗಳಲ್ಲಿ 3 ಸಾವಿರ ಖಾಸಗಿ ಅನುದಾನರಹಿತ ಶಾಲೆಗಳಿಗೆ ಹೋಗುತ್ತಿದ್ದಾರೆ. ಇಂತಹ ಖಾಸಗಿ ಶಾಲೆಗೆ ಹೋಗುತ್ತಿರುವ ಮಕ್ಕಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಮಕ್ಕಳಲ್ಲಿ ಆರೋಗ್ಯ ಸಮಸ್ಯೆಯ ಪಾಲು

* ಬದಲಾದ ಜೀವನ ಶೈಲಿ ರೋಗ ಶೇ.14

* ಮಕ್ಕಳಿಗೆ ದೃಷ್ಟಿ ಸಮಸ್ಯೆಗಳಿಗೆ ಶೇ. 15.2

* ಮಕ್ಕಳಿಗೆ ದಂತಕ್ಷಯ ಸಮಸ್ಯೆ ಶೇ. 29.9

* ರಕ್ತ ಹೀನತೆಯ ತೊಂದರೆ ಶೇ.3.4

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News