ಡಿ.15ಕ್ಕೆ ಜೈನ್ ಸಂಘಟನೆಯ ರಾಷ್ಟ್ರೀಯ ಅಧಿವೇಶನ

Update: 2018-12-12 17:16 GMT

ಬೆಂಗಳೂರು, ಡಿ.12: ಭಾರತೀಯ ಜೈನ ಸಂಘಟನೆಯ ರಾಷ್ಟ್ರೀಯ ಅಧಿವೇಶನವನ್ನು ಡಿ.15 ಹಾಗೂ 16ರಂದು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ದಿನೇಶ್ ಪಾಲರೇಚ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿವೇಶನವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಾಂತಿಲಾಲ್ ಮುಢ್ಯ ವಹಿಸಲಿದ್ದಾರೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಪಶುಪಾಲನಾ ಸಚಿವ ವೆಂಕಟರಾವ್ ನಾಡಗೌಡ, ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವಕುಮಾರ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಇನ್ನು, ಸಂಘಟನೆಯು ಕಳೆದ ಎರಡು ವರ್ಷಗಳಿಂದ ಮೌಲ್ಯ ವರ್ಧನೆ ಯೋಜನೆಯಡಿಯಲ್ಲಿ 23 ಲಕ್ಷ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ನೀಡಲು ಪ್ರಾರಂಭಿಸಿದ್ದು, ಮಹಾರಾಷ್ಟ್ರದ ಆತ್ಮಹತ್ಯೆ ಪೀಡಿತ ರೈತರ ಹಾಗೂ ಆದಿವಾಸಿ ಪರಿವಾರದ ಸಾವಿರಾರು ಮಕ್ಕಳಿಗೆ ಶಿಕ್ಷಣವನ್ನು ಕಲ್ಪಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News