33 ವರ್ಷಗಳ ನಂತರ ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಇಬ್ಬರು ಮುಸ್ಲಿಂ ಶಾಸಕರು

Update: 2018-12-14 06:58 GMT

ಭೋಪಾಲ್, ಡಿ. 14: ಬರೋಬ್ಬರಿ 33 ವರ್ಷಗಳ ನಂತರ ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಇಬ್ಬರು ಮುಸ್ಲಿಂ ಶಾಸಕರಿದ್ದಾರೆ. ಭೋಪಾಲ ಉತ್ತರದಿಂದ ಆಯ್ಕೆಯಾಗಿರುವ ಆರಿಫ್ ಅಖೀಲ್ ಹಾಗೂ ಭೋಪಾಲ ಮಧ್ಯ ಕ್ಷೇತ್ರದಿಂದ ಆಯ್ಕೆಯಾಗಿರುವ ಆರಿಫ್ ಮಸೂದ್ ಈ ಇಬ್ಬರು ಮುಸ್ಲಿಂ ಶಾಸಕರಾಗಿದ್ದಾರೆ.

1998ರಿಂದ ಅಖೀಲ್ ಭೋಪಾಲದ 230 ಮಂದಿ ಸದಸ್ಯರ ವಿಧಾನಸಭೆಯಲ್ಲಿ ಏಕೈಕ ಮುಸ್ಲಿಂ ಶಾಸಕರಾಗಿದ್ದರು. ಇತ್ತೀಚಿಗಿನ ಚುನಾವಣೆಯಲ್ಲಿ ಮಸೂದ್ ವಿಜೇತರಾಗಿ ಅವರಿಗೆ ಸಾಥ್ ನೀಡಿದ್ದಾರೆ. ಇಬ್ಬರೂ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ.

ಅಖೀಲ್ ಅವರು ಬಿಜೆಪಿಯ ಫಾತಿಮಾ ರಸೂಲ್ ಅವರನ್ನು 35,000 ಮತಗಳ ಅಂತರದಿಂದ ಸೋಲಿಸಿದರೆ ಮಸೂದ್ ಅವರು ಬಿಜೆಪಿಯ ಸುರೇಂದ್ರನಾಥ್ ಸಿಂಗ್ ಅವರನ್ನು 15,000 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಈ ಬಾರಿ ಕಾಂಗ್ರೆಸ್  ಓರ್ವ ಮಹಿಳಾ ಅಭ್ಯರ್ಥಿ ಮಸರ್ರತ್ ಶಹೀದ್ ಸಹಿತ ಮೂರು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರೆ ಬಿಜೆಪಿ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಮಾತ್ರ ಟಿಕೆಟ್ ನೀಡಿತ್ತು. ಮಧ್ಯ ಪ್ರದೇಶದ ಜನಸಂಖ್ಯೆಯ ಪೈಕಿ ಶೇ 8ರಿಂದ 9ರಷ್ಟು ಮಂದಿ ಮುಸ್ಲಿಮರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News