ಜಾಹೀರಾತುಗಳಿಗಾಗಿ 5,200 ಕೋಟಿ ರೂ.ಗೂ ಅಧಿಕ ವ್ಯಯಿಸಿದ ಮೋದಿ ಸರಕಾರ

Update: 2018-12-14 09:38 GMT

ಹೊಸದಿಲ್ಲಿ, ಡಿ. 14: ಕೇಂದ್ರ ಸರಕಾರ 2014-15ರಿಂದ ಇಲೆಕ್ಟ್ರಾನಿಕ್, ಮುದ್ರಣ ಮತ್ತು ಇತರ ಮಾಧ್ಯಮಗಳಲ್ಲಿ ಜಾಹೀರಾತುಗಳಿಗಾಗಿ 5,200 ಕೋಟಿ ರೂ. ಗೂ ಅಧಿಕ ವೆಚ್ಚ ಮಾಡಿದೆ ಎಂದು ಲೋಕಸಭೆಗೆ ಗುರುವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಲಿಖಿತ ಉತ್ತರವೊಂದರಲ್ಲಿ ಹೇಳಿದ್ದಾರೆ.

ಸಚಿವರು ನೀಡಿದ ಮಾಹಿತಿಯಂತೆ 2014-15ರಲ್ಲಿ ಜಾಹೀರಾತುಗಳಿಗಾಗಿ 979.78 ಕೋಟಿ ರೂ. ವೆಚ್ಚ ಮಾಡಲಾಗಿದ್ದರೆ, 2015-16ರಲ್ಲಿ 1,160.16 ಕೋಟಿ, 2016-17ರಲ್ಲಿ1,264.26 ಕೋಟಿ ಹಾಗೂ  2017-18ರಲ್ಲಿ 1,313.57 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆರ್ಥಿಕ ವರ್ಷ 2018-19ರಲ್ಲಿ ಡಿಸೆಂಬರ್ 7ರ ತನಕ  ಜಾಹೀರಾತುಗಳಿಗಾಗಿ 527.96 ರೂ. ಕೋಟಿ ಖರ್ಚು ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದು ಒಟ್ಟು 5245.73 ಕೋಟಿ ರೂ. ವೆಚ್ಚ ಮಾಡಿದಂತಾಗಿದೆ ಎಂದಿದ್ದಾರೆ.

ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ ಹಾಗೂ ಕ್ಷೇತ್ರ ಪ್ರಸಾರ ಮತ್ತು ಹಾಡು ಹಾಗೂ ನಾಟಕ ವಿಭಾಗವನ್ನು ವಿಲೀನಗೊಳಿಸಿ ಕಳೆದ ವರ್ಷ ಸರಕಾರ ರಚಿಸಿದ್ದ ಬ್ಯುರೋ ಆಫ್ ಔಟ್‍ರೀಚ್ ಆ್ಯಂಡ್ ಕಮ್ಯುನಿಕೇಶನ್ ಮುಖಾಂತರ ಮುದ್ರಣ ಮಾಧ್ಯಮದ ಜಾಹೀರಾತುಗಳಿಗೆ 2,282 ಕೋಟಿ ರೂ., ಧ್ವನಿ-ದೃಶ್ಯ ಮಾಧ್ಯಮದ ಮೂಲಕ ಜಾಹೀರಾತಿಗಾಗಿ 2,312,59 ಕೋಟಿ ರೂ. ಹಾಗೂ ಹೊರಾಂಗಣ ಜಾಹೀರಾತುಗಳಿಗಾಗಿ 651.14 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News