ಆಸ್ಟ್ರೇಲಿಯಾ: ಮಕ್ಕಳನ್ನು ರಕ್ಷಿಸಲು ಹೋದ ಮೂವರು ಭಾರತೀಯರು ನೀರುಪಾಲು

Update: 2018-12-18 12:12 GMT

ಸಿಡ್ನಿ, ಡಿ.18: ಆಸ್ಟ್ರೇಲಿಯಾದ ಮೂನೀ ಬೀಚ್‍ನಲ್ಲಿ ನಡೆದ ದುರಂತದಲ್ಲಿ ಮೂವರು ಭಾರತೀಯರು ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರ ಶವ ಪತ್ತೆಯಾಗಿದ್ದರೆ, ಇನ್ನೊಬ್ಬನ ಶವಕ್ಕಾಗಿ ಶೋಧ ಮುಂದುವರಿದಿದೆ.

ತಮ್ಮ ಕುಟುಂಬದ ಇಬ್ಬರು ಮಕ್ಕಳ ಸಹಿತ ಮೂವರು ಮುಳುಗುತ್ತಿರುವುದನ್ನು ಕಂಡು ಅವರನ್ನು ರಕ್ಷಿಸಲು ಮೂವರೂ ನೀರಿಗೆ ಧುಮುಕಿದ್ದರು. ಆದರೆ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದು ಅವರ ಆರೋಗ್ಯ ಸ್ಥಿರವಾಗಿದೆ.

ರಕ್ಷಿಸಲ್ಪಟ್ಟವರಲ್ಲಿ 15 ವರ್ಷದ ಒಬ್ಬ ಬಾಲಕ ಹಾಗೂ ಬಾಲಕಿ ಹಾಗೂ 17 ವರ್ಷದ ಒಬ್ಬಳು ಯುವತಿ ಸೇರಿದ್ದಾರೆ. ಮೃತಪಟ್ಟವರನ್ನು ನಲ್ಗೊಂಡಾದ ಘೌಸುದ್ದೀನ್ (45), ಆತನ ಅಳಿಯ ಜುನೈದ್ (28) ಹಾಗೂ ಹೈದರಾಬಾದ್ ನ ರಾಹತ್ (25) ಎಂದು ಗುರುತಿಸಲಾಗಿದೆ. ಜುನೈದ್  ಶವ ಇನ್ನಷ್ಟೇ ದೊರಕಬೇಕಿದೆ.

ಸಿಡ್ನಿ ಹಾಗೂ ಬ್ರಿಸ್ಬೇನ್ ನಲ್ಲಿ ವಾಸಿಸುತ್ತಿರುವ ಎರಡು ಕುಟುಂಬಗಳು ರಜೆಯನ್ನು ಕಳೆಯಲು ಮೂನೀ ಬಿಚಿಗೆ ಬಂದಿದ್ದರು. ಬೀಚಿನ ಸಮೀಪದ ಮನೆಯೊಂದನ್ನು ಅವರು ಬಾಡಿಗೆಗೆ ಪಡೆದು ರಜೆಯನ್ನು ಅಲ್ಲಿ ಕಳೆಯುತ್ತಿದ್ದಾಗ ಈ ದುರಂತ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News