ಮಾಯವಾಗುತ್ತಿದೆ ಶನಿ ಗ್ರಹದ ಉಂಗುರಗಳು

Update: 2018-12-18 15:36 GMT

ವಾಶಿಂಗ್ಟನ್, ಡಿ. 18: ಇತರ ಗ್ರಹಗಳಿಗೆ ಹೋಲಿಸಿದರೆ ಶನಿ ಗ್ರಹದ ಬಣ್ಣ ಬಣ್ಣದ ಉಂಗುರಗಳು ಅದರ ವೈಶಿಷ್ಟವಾಗಿದ್ದವು. ಆದರೆ, ಈ ಉಂಗುರಗಳು ಶೀಘ್ರವಾಗಿ ಕಳೆದುಹೋಗುತ್ತಿವೆ ಎಂಬುದಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ವಿಜ್ಞಾನಿಗಳು ಹೇಳಿದ್ದಾರೆ.

ಶನಿ ಗ್ರಹದ ಕಾಂತೀಯ ಕ್ಷೇತ್ರದ ಸೆಳೆತಕ್ಕೆ ಒಳಪಟ್ಟು ಉಂಗುರಗಳು ಕ್ಷಿಪ್ರವಾಗಿ ಮಂಜಿನ ಹನಿಗಳ ಮಳೆಯಾಗಿ ಉದುರುತ್ತಿವೆ. ಇದೇ ವೇಗದಲ್ಲಿ, ಮುಂದಿನ 10 ಕೋಟಿ ವರ್ಷಗಳಲ್ಲಿ ಅದರ ಉಂಗುರಗಳು ಸಂಪೂರ್ಣವಾಗಿ ಮಾಯವಾಗಲಿವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

‘‘ಈ ಮಂಜಿನ ಹನಿಗಳ ಮಳೆಯ ರೂಪದಲ್ಲಿ ನೀರಿನ ಉತ್ಪನ್ನಗಳು, ಅರ್ಧ ಗಂಟೆಯಲ್ಲಿ ಒಂದು ಒಲಿಂಪಿಕ್ ಈಜು ಕೊಳದಲ್ಲಿ ಹಿಡಿಯುವ ನೀರಿನಷ್ಟು ಪ್ರಮಾಣದಲ್ಲಿ ಖಾಲಿಯಾಗುತ್ತಿವೆ’’ ಎಂದು ನಾಸಾದ ಗೊಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರದ ಜೇಮ್ಸ್ ಒ’ಡೊನೋ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News