ಐಪಿಎಲ್ ಹರಾಜು: ಇನ್ನೂ ಪ್ರಥಮ ದರ್ಜೆ ಪಂದ್ಯ ಆಡದ ಪ್ರತಿಭೆಗೆ 4.8 ಕೋಟಿ ರೂ. !

Update: 2018-12-19 04:39 GMT

ಹೊಸದಿಲ್ಲಿ, ಡಿ. 19: ಇಂಡಿಯನ್ ಪ್ರಿಮಿಯರ್ ಲೀಗ್‌ನಿಂದಾಗಿ ಭಾರತದಲ್ಲಿ ಯುವ ಕ್ರಿಕೆಟಿಗರು ಕೋಟ್ಯಧಿಪತಿಗಳಾದ ಹಲವು ನಿದರ್ಶನಗಳಿವೆ. ಈ ಸಾಲಿಗೆ ಪಾಟಿಯಾಲಾದ 17ರ ಯುವಕ ಪ್ರಭ್‌ಸಿಮ್ರನ್ ಸಿಂಗ್ ಹೊಸ ಸೇರ್ಪಡೆ. 17 ವರ್ಷದ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಸಿಂಗ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ 4.8 ಕೋಟಿ ರೂಪಾಯಿಗೆ ಖರೀದಿಸಿದೆ.

ಈ ವರ್ಷಾರಂಭದಲ್ಲಿ ಪ್ರಭ್‌ಸಿಮ್ರನ್, ಪಂಜಾಬ್‌ನ 23 ವರ್ಷ ವಯೋಮಿತಿಯ ಅಂತರ ಜಿಲ್ಲಾ ಟೂರ್ನಿಯಲ್ಲಿ ಅಮೃತಸರ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ 301 ಎಸೆತಗಳಲ್ಲಿ 298 ರನ್ ಸಿಡಿಸಿ ಸುದ್ದಿ ಮಾಡಿದ್ದರು. ಶ್ರೀಲಂಕಾಗೆ ಪ್ರವಾಸ ಕೈಗೊಂಡ ಭಾರತದ 19ರ ವಯೋಮಿತಿಯ ತಂಡಕ್ಕೆ ಆಯ್ಕೆದಾರರು ಇವರನ್ನು ನಿರ್ಲಕ್ಷಿಸಿದ ಬೆನ್ನಲ್ಲೇ ಈ ಸಾಧನೆ ಮಾಡಿಲಾಗಿತ್ತು.

ಇನ್ನೂ ತನ್ನ ಮೊದಲ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯ ಆಡದ ಪ್ರಭ್‌ಸಿಮ್ರನ್, ಕ್ಷಿಪ್ರವಾಗಿ ರನ್ ಗಳಿಸುವ ತಮ್ಮ ಚಾಕಚಕ್ಯತೆಯಿಂದ ಗಮನ ಸೆಳೆದಿದ್ದಾರೆ. ಇದರಿಂದಾಗಿ ಪಂಜಾಬ್ ಫ್ರಾಂಚೈಸಿಗಳು ದೊಡ್ಡ ಮೊತ್ತಕ್ಕೆ ಈತನನ್ನು ಖರೀದಿಸಿದ್ದಾರೆ.

ಪ್ರಭ್‌ಸಿಮ್ರನ್ ಮುಂಬೈ ಇಂಡಿಯನ್ಸ್‌ಗೆ 80 ಲಕ್ಷಕ್ಕೆ ಮಾರಾಟವಾದ ಬ್ಯಾಟ್ಸ್‌ಮನ್ ಅನ್‌ಮೋಲ್‌ಪ್ರೀತ್ ಸಿಂಗ್‌ನ ಸೋದರ ಸಂಬಂಧಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News