ಹುಷಾರ್..ನಿಮ್ಮ ಕಂಪ್ಯೂಟರ್ ಮೇಲೆ ಸರಕಾರ ಕಣ್ಣಿಟ್ಟಿದೆ!

Update: 2018-12-21 07:03 GMT

ಹೊಸದಿಲ್ಲಿ,ಡಿ.21: ದೇಶದ ಯಾವುದೇ ಕಂಪ್ಯೂಟರ್‍ಗಳಲ್ಲಿ ಸೃಷ್ಟಿಸಿದ, ವರ್ಗಾಯಿಸಿದ, ಸ್ವೀಕರಿಸಿದ ಇಲ್ಲವೇ ಸಂಗ್ರಹಿಸಿದ ಯಾವುದೇ ಮಾಹಿತಿಗಳನ್ನು ತಡೆಹಿಡಿಯಲು, ನಿಗಾ ವಹಿಸಲು ಅಥವಾ ಸಂಕೇತೀಕರಿಸಲು 10 ಕೇಂದ್ರೀಯ ಏಜೆನ್ಸಿಗಳಿಗೆ ಅನುಮತಿ ನೀಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಈ ಅನುಮತಿ ಪಡೆದ ವಿಶೇಷ ಏಜೆನ್ಸಿಗಳೆಂದರೆ ಗುಪ್ತಚರ ವಿಭಾಗ, ನಾರ್ಕೊಟಿಕ್ಸ್ ನಿಯಂತ್ರಣ ಬ್ಯೂರೊ, ಕಾನೂನು ಜಾರಿ ನಿರ್ದೇಶನಾಲಯ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ, ಕಂದಾಯ ಗುಪ್ತಚರ ನಿರ್ದೇಶನಾಲಯ, ಕೇಂದ್ರೀಯ ತನಿಖಾ ಸಂಸ್ಥೆ, ರಾಷ್ಟ್ರೀಯ ತನಿಖಾ ಸಂಸ್ಥೆ, ಕ್ಯಾಬಿನೆಟ್ ಸೆಕ್ರೇಟಿಯೇಟ್ (ಆರ್ & ಎಡಬ್ಲ್ಯು), ಡೈರೆಕ್ಟರೇಟ್ ಆಫ್ ಸಿಗ್ನಲ್ ಇಂಟೆಲಿಜೆನ್ಸ್, ದೆಹಲಿ ಪೊಲೀಸ್ ಆಯುಕ್ತರ ಕಚೇರಿ.

ಈ ಆದೇಶದ ಪ್ರಕಾರ, ಕಂಪ್ಯೂಟರ್ ಸಂಪನ್ಮೂಲದ ಸೇವೆ ಒದಗಿಸುವ ವ್ಯಕ್ತಿಗಳು, ಇಂಥ ಏಜೆನ್ಸಿಗಳಿಗೆ ಈ ಸೌಲಭ್ಯವನ್ನು ಒದಗಿಸಲು ಮತ್ತು ತಾಂತ್ರಿಕ ನೆರವು ನೀಡಲು ನಿರಾಕರಿಸಿದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡಕ್ಕೆ ಅರ್ಹರಾಗುತ್ತಾರೆ.

ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ- 2000ದ ಸೆಕ್ಷನ್ 69(1) ಅಡಿಯಲ್ಲಿ ಈ ಅನುಮತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News