ಝಕಾತ್ ಫೌಂಡೇಶನ್ ನಲ್ಲಿ ತರಬೇತಿ ಪಡೆದ 29 ಅಭ್ಯರ್ಥಿಗಳು ಯುಪಿಎಸ್‍ಸಿ ಮೈನ್ ಪರೀಕ್ಷೆಯಲ್ಲಿ ಉತ್ತೀರ್ಣ

Update: 2018-12-22 10:15 GMT

ಹೊಸದಿಲ್ಲಿ, ಡಿ.22: ಆಡಳಿತಾತ್ಮಕ ಐಎಎಸ್, ಐಪಿಎಸ್, ಐಎಫ್‍ಎಸ್ ಹಾಗೂ ಐಆರ್‍ಎಸ್ ಪರೀಕ್ಷೆಗೆ ಝಕಾತ್ ಫೌಂಡೇಶನ್ ಆಫ್ ಇಂಡಿಯಾ ತರಬೇತಿ ನೀಡಿದ 29 ಅಭ್ಯರ್ಥಿಗಳು ಸಿವಿಲ್ ಸರ್ವಿಸಸ್ ಮೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಈ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಹಾಜರಾಗುವ ನಿಟ್ಟಿನಲ್ಲಿ ಸೂಕ್ತ ತರಬೇತಿಯನ್ನೂ ಝಕಾತ್ ಫೌಂಡೇಶನ್ ನೀಡಲಿದ್ದು ಅಣಕು ಸಂದರ್ಶನಗಳಿಗೆ ಹಾಜರಾಗಲು ಅರ್ಹ ಅಭ್ಯರ್ಥಿಗಳನ್ನು ಫೌಂಡೇಶನ್ ಆಹ್ವಾನಿಸಿದೆ. ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ನಡೆದ ಸಿವಿಲ್ ಸರ್ವಿಸಸ್ ಮೈನ್ ಪರೀಕ್ಷೆಯ ಫಲಿತಾಂಶ ಡಿಸೆಂಬರ್ 20ರಂದು ಘೋಷಣೆಯಾಗಿದೆ.

ಪ್ರತಿ ವರ್ಷ ಝಕಾತ್ ಫೌಂಡೇಶನ್ ಮೂಲಕ ತರಬೇತಿ ಪಡೆಯುವ ಅಭ್ಯರ್ಥಿಗಳು ಯಶಸ್ವಿಯಾಗಿ ಹೊರಹೊಮ್ಮುತ್ತಿದ್ದಾರೆ. ಹೆಚ್ಚಿನ ಅಭ್ಯರ್ಥಿಗಳು ಅಲ್ಪಸಂಖ್ಯಾತ ಸಮುದಾಯದವರಾಗಿದ್ದಾರೆ.

ಯುಪಿಎಸ್‍ಸಿ ಮೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 29 ಅಭ್ಯರ್ಥಿಗಳ ಹೆಸರುಗಳು ಈ ಕೆಳಗಿದೆ

ಮುಹಮ್ಮದ್ ಮುಸ್ತಫಾ (ಆಂಧ್ರ ಪ್ರದೇಶ), ಗೌಹರ್ ಹಸನ್ (ಬಿಹಾರ), ಶಾಹಿದ್ ರಾಝಾ(ಬಿಹಾರ), ಫೈಝಲ್ ರಾಝಾ (ಬಿಹಾರ), ಮುಹಮ್ಮದ್ ತೌಸಿಫುಲ್ಲಾ (ಬಿಹಾರ), ಇಮಾಮುಲ್ ಹಕ್ (ದಿಲ್ಲಿ), ಅನ್ಸಾರಿ ಝೈದ್ (ಗುಜರಾತ್), ರೇನಾ ಜಾಮಿಲ್, ಅತುಲ್ ಚೌಧರಿ (ಜಮ್ಮು – ಕಾಶ್ಮೀರ), ಬಾಬರ್ ಅಲಿ (ಜಮ್ಮು-ಕಾಶ್ಮೀರ), ಮುಹಮ್ಮದ್ ನವಾಝ್ (ಜಮ್ಮು-ಕಾಶ್ಮೀರ), ನಸೀಂ ಅಕ್ರಂ (ಜಮ್ಮು ಕಾಶ್ಮೀರ), ಇನಾಬತ್ ಖಾಲಿಕ್ (ಜಮ್ಮು ಕಾಶ್ಮೀರ), ಮುನಾಫ್ ಕೆ. (ಕೇರಳ), ಮುಹಮ್ಮದ್ ಅಬ್ ಜಲೀಲ್ (ಕೇರಳ), ಕೆವಿನ್ ಟೋಮ್ (ಕೇರಳ), ಅಝೀಝ್ ಅಕ್ರಂ (ಕೇರಳ), ರೆಂಜಿನಾ ಮೇರಿ (ಕೇರಳ), ಮುಹಮ್ಮದ್ ಶಿಯಾಫ್ (ಕೇರಳ), ಸಿಬಿ ಜಾಯ್ (ಕೇರಳ), ಶೇಖ್ ಮುಹಮ್ಮದ್ ಝೈದ್ (ಮಹಾರಾಷ್ಟ್ರ), ಸೈಯದ್ ರಿಯಾಝ್ (ಮಹಾರಾಷ್ಟ್ರ), ಎಸ್. ರಿಯಾಝ್ ಆರ್. (ಮಹಾರಾಷ್ಟ್ರ), ಡಾ.ಅಕ್ರಂ ಖಾನ್ (ಮಹಾರಾಷ್ಟ್ರ), ಮುಹಮ್ಮದ್ ಝೀಶಾನ್ (ಉ.ಪ್ರದೇಶ), ಶಾಹಿದ್ ಅಹ್ಮದ್ (ಉ.ಪ್ರದೇಶ), ಮಾಝ್ ಅಖ್ತರ್ (ಉ.ಪ್ರದೇಶ), ಜುನೈದ್ ಅಹ್ಮದ್ (ಉ.ಪ್ರದೇಶ), ಖಾಲಿದ್ ಹುಸೈನ್ (ಉ.ಪ್ರದೇಶ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News