ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಂಡಿರುವುದು ದುಃಖವಾಗಿದೆ: ಲಕ್ಷ್ಮಿ ಹೆಬ್ಬಾಳ್ಕರ್

Update: 2018-12-22 13:13 GMT

ಬೆಂಗಳೂರು, ಡಿ.22: ರಮೇಶ್ ಜಾರಕಿಹೊಳಿ ಅವರು ಸಚಿವ ಸ್ಥಾನ ಕಳೆದುಕೊಂಡಿರುವುದಕ್ಕೆ ನಿಜವಾಗಿಯೂ ವೈಯಕ್ತಿಕವಾಗಿ ದುಃಖವಾಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಗೋಕಾಕ ಮತ ಕ್ಷೇತ್ರ ಲಿಂಗಾಯತರ ಪ್ರಭಾವವಿರುವ ಕ್ಷೇತ್ರ. ಅಂಥ ಸಾಮಾನ್ಯ ಕ್ಷೇತ್ರದಲ್ಲಿ ಸತತ 5 ಬಾರಿ ಗೆದ್ದಿರುವ ಹಿರಿಯರು. ಅವರನ್ನು ಇಷ್ಟು ಬೇಗ ಸಂಪುಟದಿಂದ ತೆಗೆಯಬಾರದಿತ್ತು ಎಂದರು.

ಲಿಂಗಾಯತರನ್ನು ಕಡೆಗಣಿಸಿಲ್ಲ. ಎಂ.ಬಿ. ಪಾಟೀಲರಿಗೆ ಅವಕಾಶ ಸಿಕ್ಕಿದೆ. ಸಚಿವ ಸಂಪುಟ ವಿಸ್ತರಣೆ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿತ್ತು. ಬಹಳಷ್ಟು ಹರಸಾಹಸಗಳು ಕೂಡ ನಡೆದಿದ್ದವು. ಈಗ ಎಲ್ಲವೂ ಸುಖಾಂತ್ಯವಾಗಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಕೋರಿದರು.

ಅಂಜಲಿ ನಿಂಬಾಳ್ಕರ್ ಅವರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಿದ್ದು ಸೇರಿದಂತೆ ಪಕ್ಷದ ಎಲ್ಲ ನಿರ್ಧಾರಗಳೂ ತೃಪ್ತಿ ತಂದಿವೆ ಎಂದ ಅವರು, ಸಮ್ಮಿಶ್ರ ಸರಕಾರವಿರುವುದರಿಂದ ಎಲ್ಲರಿಗೂ ಅವಕಾಶ ಆಗುವುದಿಲ್ಲ. ಜನರು ನನ್ನನ್ನು ಪ್ರಭಾವಿ ಎಂದು ಗುರುತಿಸುತ್ತಾರೆ. ಆ ಬಿರುದು ಸಾಕು ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News