ವಿಕಲಚೇತನರ ರಿಯಾಯಿತಿ ಬಸ್ ಪಾಸ್ ನವೀಕರಣ

Update: 2018-12-24 18:46 GMT

ಬೆಂಗಳೂರು, ಡಿ.24: ಮುಂದಿನ ವರ್ಷಕ್ಕೆ ವಿಕಲಚೇತನರ ರಿಯಾಯಿತಿ ಬಸ್ ಪಾಸ್‌ಗಳನ್ನು ವಿತರಣೆ ಹಾಗೂ ನವೀಕರಣ ಮಾಡಬೇಕಿರುತ್ತದೆ. ವಿಕಲಚೇತನ ಫಲಾನುಭಗಳಿಗೆ ನವೀಕರಿಸಿಕೊಳ್ಳಲು ಆಗಬಹುದಾದ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಹಾಲಿ 2018 ನೇ ಸಾಲಿನಲ್ಲಿ ವಿತರಿಸಿರುವ ವಿಕಲಚೇತನರ ಬಸ್ ಪಾಸ್‌ಗಳನ್ನು ಫೆ.2 ರವರೆಗೆ ಮುಂದುವರೆಸಬಹುದು.

2019 ನೇ ಸಾಲಿನ ವಿಕಲಚೇತನರ ಪಾಸುಗಳ ವಿತರಣೆ, ನವೀಕರಣವನ್ನು ಡಿ.12ರಿಂದ ಪ್ರಾರಂಭಿಸಲಾಗುವುದು. ಈ ಸಂಬಂಧ ಫಲಾನುಭವಿಗಳು 660 ರೂ. ಪಾವತಿಸಿ 2019ನೇ ಸಾಲಿಗೆ ಪಾಸನ್ನು ಪಡೆಯಬಹುದಾಗಿದೆ. ಎಲ್ಲಾ ಫಲಾನುಭವಿಗಳು ಫೆ.2 ರೊಳಗೆ ವಿಕಲಚೇತನರ ರಿಯಾಯಿತಿ ಬಸ್ ಪಾಸ್‌ಗಳನ್ನು ಪಡೆದುಕೊಳ್ಳಲು ಕೋರಲಾಗಿದೆ. ಪ್ರಸ್ತುತ ಸಾಲಿನಲ್ಲಿ ವಿಕಲಚೇತನರ ಪಾಸುದಾರರ ನವೀಕರಣ ಸಮಯದಲ್ಲಿ ಗುರುತಿನ ಚೀಟಿಯ ಮಾನ್ಯತಾ ಅವಧಿಯನ್ನು ಪರಿಶೀಲನೆ ಮಾಡುವ ಸಲುವಾಗಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ತಯಾರಿಸುವ ಗುರುತಿನ ಚೀಟಿಯ, ದೃಢೀಕರಣ ಪತ್ರದ ಮೂಲ ಪ್ರತಿಯನ್ನು ಪರಿಶೀಲನೆಗಾಗಿ ತೋರಿಸಬೇಕು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News