ಬಿಜೆಪಿಗೆ ಮತ್ತೆ ಶಿವಸೇನೆ ಶಾಕ್ ಟ್ರೀಟ್‌ಮೆಂಟ್!

Update: 2018-12-25 03:41 GMT

ಕೊಲ್ಲಾಪುರ,, ಡಿ.25: ಮಹಾರಾಷ್ಟ್ರದಲ್ಲಿ ರೈತರು ಬರದಿಂದ ನರಳುವುದು ಮುಕ್ತಗೊಳ್ಳುವವರೆಗೆ ಹಾಗೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವವರೆಗೆ ಬಿಜೆಪಿ ಜತೆ ಸೇರಿ ಚುನಾವಣಾ ಸಿದ್ಧತೆ ನಡೆಸುವ ಅಥವಾ ಆ ಪಕ್ಷದ ಜತೆ ಸೀಟು ಹಂಚಿಕೆ ಬಗ್ಗೆ ಚರ್ಚಿಸುವ ಆಸಕ್ತಿ ತಮ್ಮ ಪಕ್ಷಕ್ಕೆ ಇಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

"ನಾನು ಕುಂಭಕರ್ಣನನ್ನು ಎಚ್ಚರಿಸುವ ಸಲುವಾಗಿ ಉದ್ದೇಶಪೂರ್ವಕವಾಗಿಯೇ ಅಯೋಧ್ಯೆಗೆ ಹೋಗಿದ್ದೆ. ಬಿಜೆಪಿ ನಮ್ಮ ದೇವರನ್ನು ದುರ್ಬಳಕೆ ಮಾಡಿಕೊಂಡರೆ ನಾವು ಅವರನ್ನು ಕ್ಷಮಿಸುವುದಿಲ್ಲ. ನಾವು ಅವರಿಗೆ ಬಾಗಿಲು ಮುಚ್ಚುತ್ತೇವೆ" ಎಂದು ಪಂಢರಾಪುರದಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಗುಡುಗಿದರು.

ಜನ ರಾಷ್ಟ್ರೀಯ ಪಕ್ಷಗಳ ಬದಲಾಗಿ ಪ್ರಬಲ ಪ್ರಾದೇಶಿಕ ಪಕ್ಷಗಳನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ ಎಂಬ ಸ್ಪಷ್ಟ ಸಂದೇಶ ಮಿಝೋರಾಂ ಹಾಗೂ ತೆಲಂಗಾಣ ಫಲಿತಾಂಶದಿಂದ ವ್ಯಕ್ತವಾಗಿದೆ. ಮಹಾರಾಷ್ಟ್ರದಲ್ಲಿ ಕೂಡಾ ಜನತೆ ಇಂಥದ್ದೇ ಬಹುಮತವನ್ನು ನಮಗೆ ನೀಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಹಾಗೂ ಪಾಸ್ವಾನ್ ಪಕ್ಷದ ನಡುವಿನ ಮೈತ್ರಿ ಬಗ್ಗೆ ಪ್ರಸ್ತಾವಿಸಿ, "ನಿತೀಶ್ ಕುಮಾರ್ ಹಾಗೂ ಪಾಸ್ವಾನ್ ಅವರಂಥ ನಾಯಕರು ರಾಮಮಂದಿರ ವಿವಾದದ ಬಗ್ಗೆ ತಮ್ಮ ನಿಲುವು ಬಹಿರಂಗಪಡಿಸಲಿ" ಎಂದು ಸವಾಲು ಹಾಕಿದರು.

ಪಕ್ಷದ ಆದ್ಯತೆ ರೈತರ ಕಲ್ಯಾಣವೇ ವಿನಃ ಅಧಿಕಾರವಲ್ಲ. ಈ ಹಿನ್ನೆಲೆಯಲ್ಲಿ ಜನವರಿ 1ರಿಂದ ರಾಜ್ಯಾದ್ಯಂತ ಬರಪೀಡಿತ ಪ್ರದೇಶಗಳ ಪ್ರವಾಸ ಕೈಗೊಂಡು ಅಧ್ಯಯನ ನಡೆಸುವುದಾಗಿ ಠಾಕ್ರೆ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News