ಜಪಾನ್: ಹೊಸವರ್ಷ ಸಂಭ್ರಮಿಗರ ಮೇಲೆ ಹರಿದ ಕಾರು; 9 ಮಂದಿಗೆ ಗಾಯ

Update: 2019-01-01 16:12 GMT

ಟೋಕಿಯೊ, ಜ. 1: ಜಪಾನ್ ರಾಜಧಾನಿ ಟೋಕಿಯೋದ ರಸ್ತೆಯೊಂದರಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಗುಂಪೊಂದರ ಮೇಲೆ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ಕಾರು ಹರಿಸಿದ ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದೆ.

ಟೋಕಿಯೊದ ಫ್ಯಾಶನ್ ಸಾಮಗ್ರಿಗಳಿಗೆ ಪ್ರಸಿದ್ಧವಾಗಿರುವ ಹರಜುಕು ಜಿಲ್ಲೆಯ ಟಕೆಶಿಟ ಬೀದಿಯಲ್ಲಿ ಮಧ್ಯರಾತ್ರಿ ಕಳೆದು 10 ನಿಮಿಷದ ಬಳಿಕ 21 ವರ್ಷದ ಕಝುಹಿರೊ ಕುಸಕಬೆ ‘ಕೊಲ್ಲುವ ಉದ್ದೇಶದಿಂದ’ ಜನರ ಮೇಲೆ ತನ್ನ ಚಿಕ್ಕ ವಾಹನವನ್ನು ಹರಿಸಿದನು ಎಂದು ಪೊಲೀಸ್ ವಕ್ತಾರರೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಮರಣ ದಂಡನೆಗೆ ಪ್ರತಿಯಾಗಿ ತಾನು ಈ ಕೃತ್ಯ ನಡೆಸಿದ್ದೇನೆ ಎಂಬುದಾಗಿ ಆರೋಪಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News