ಹಿಂದೂಗಳ ಮೇಲೆ ಹಾಡಹಗಲೇ ಅತ್ಯಾಚಾರ: ಶಬರಿಮಲೆ ವಿವಾದ ಕುರಿತು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ

Update: 2019-01-03 06:16 GMT

ಹೊಸದಿಲ್ಲಿ, ಜ.2: ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ಆಘಾತಕಾರಿ ಹೇಳಿಕೆಯೊಂದನ್ನು ನೀಡಿರುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರು, ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಸುತ್ತ ಹಬ್ಬಿಕೊಂಡಿರುವ ವಿವಾದವನ್ನು ಅತ್ಯಾಚಾರಕ್ಕೆ ಹೋಲಿಸಿದ್ದಾರೆ.

ಶಬರಿಮಲೆ ವಿವಾದ ಹಾಗೂ ಕೇರಳದಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯು ರಾಜ್ಯಸರಕಾರದ ವೈಫಲ್ಯವಾಗಿದೆ ಮತ್ತು ಹಿಂದುಗಳ ಮೇಲೆ ಹಾಡಹಗಲೇ ನಡೆಯುತ್ತಿರುವ ಅತ್ಯಾಚಾರವಾಗಿದೆ ಎಂದು ಹೆಗಡೆ ಹೇಳಿದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪೂರ್ವಾಗ್ರಹವು ಜನರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿದೆ ಎಂದ ಅವರು,ಸರ್ವೋಚ್ಚ ನ್ಯಾಯಾಲಯವು ಶಬರಿಮಲೆ ವಿಷಯದಲ್ಲಿ ತನ್ನ ನಿರ್ದೇಶಗಳನ್ನು ನೀಡಿದೆಯಾದರೂ ಕೇರಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಅಧಿಕಾರ ರಾಜ್ಯ ಸರಕಾರದ್ದಾಗಿದೆ. ಕೇರಳ ಸರಕಾರವು ಜನತೆಯ ನಂಬಿಕೆಗೆ ನೋವುಂಟು ಮಾಡದೇ ಪರಿಸ್ಥಿತಿಯನ್ನು ನಿಭಾಯಿಸಬೇಕಿತ್ತು. ಆದರೆ ರಾಜ್ಯಸರಕಾರವು ಸಂಪೂರ್ಣವಾಗಿ ವಿಫಲಗೊಂಡಿದೆ. ಇದು ಹಿಂದೂಗಳ ಮೇಲಿನ ಹಾಡಹಗಲೇ ಅತ್ಯಾಚಾರವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News