ಸೂಟ್ ಕೇಸ್ ನಲ್ಲಿ ಯುವತಿಯ ಶವ ಪತ್ತೆ

Update: 2019-01-09 12:48 GMT

ಹೊಸದಿಲ್ಲಿ, ಜ. 9: ಸುಮಾರು ಇಪ್ಪತ್ತೈದು ವರ್ಷದ ಅಪರಿಚಿತ ಯುವತಿಯ ಶವ ಬಿಸಾಕಿದ ಸ್ಥಿತಿಯಲ್ಲಿದ್ದ  ಸೂಟ್ ಕೇಸ್ ಒಂದರಲ್ಲಿ ರಾಜಧಾನಿಯ ನ್ಯೂ ಅಶೋಕ್ ನಗರ್ ಪ್ರದೇಶದ ಕೊಂಡ್ಲಿ ಕಾಲುವೆ ಸಮೀಪ ಪತ್ತೆಯಾಗಿದೆ.

ಮಂಗಳವಾರ ರಾತ್ರಿ ಸುಮಾರು 8 ಗಂಟೆಗೆ ಈ ಸೂಟ್ ಕೇಸ್ ಅನ್ನು ರಸ್ತೆ ಬದಿ ಗಮನಿಸಿದ ಆಟೋ ಚಾಲಕನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದ. ಸೂಟ್ ಕೇಸ್ ತೆರೆದಾಗ ಅದರೊಳಗೆ ತಲೆಕೆಳಗಾದ ಸ್ಥಿತಿಯಲ್ಲಿ ಯುವತಿಯ ಶವವಿತ್ತು. ಮುಖದ ತುಂಬೆಲ್ಲಾ ಇರಿತದ ಗಾಯಗಳಿವೆ. ಆಕೆಯ ಕೈಯ್ಯಲ್ಲಿ ಮೋಹಿತ್ ಎಂದು ಬರೆಯಲಾದ ಹಚ್ಚೆಯಿದೆ.

ತನಿಖೆ ಆರಂಭಿಸಿರುವ ದಿಲ್ಲಿ ಪೊಲೀಸರು ಸೂಟ್ ಕೇಸ್ ಪತ್ತೆಯಾದ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಇಲ್ಲಿಯ ತನಕ ಹಂತಕರ ಯಾವುದೇ ಸುಳಿವು ಲಭ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News