ಮೌನ ಮುರಿದ ಸಿಬಿಐನ ನಿರ್ಗಮಿತ ಮುಖ್ಯಸ್ಥ ಅಲೋಕ್ ವರ್ಮಾ

Update: 2019-01-11 06:24 GMT

ಹೊಸದಿಲ್ಲಿ, ಜ.11: ಸಿಬಿಐನಿಂದ ಕೇಂದ್ರ ಅಗ್ನಿಶಾಮಕ ದಳಕ್ಕೆ ವರ್ಗಾವಣೆಗೊಂಡಿರುವ ಸಿಬಿಐನ ನಿರ್ಗಮಿತ ಮುಖ್ಯಸ್ಥ ಅಲೋಕ್ ವರ್ಮಾ ಅವರು ಮೌನ ಮುರಿದು ಕೇಂದ್ರ ಸರಕಾರದ ವಿರುದ್ಧ  ಅಸಮಾದಾನ ವ್ಯಕ್ತಪಡಿಸಿ,  ಸಿಬಿಐ ಮೇಲೆ ಬಾಹ್ಯ ಒತ್ತಡ ಇರುವುದನ್ನು ಬಹಿರಂಗಪಡಿಸಿದ್ದಾರೆ.

ನ್ಯಾಯಾಲಯದ  ಆದೇಶದಂತೆ ಸಿಬಿಐಗೆ ವಾಪಸಾಗಿದ್ದ ವರ್ಮಾರನ್ನು ಗುರುವಾರ ಕೇಂದ್ರ ಸರಕಾರದ  ಉನ್ನತಾಧಿಕಾರದ ಆಯ್ಕೆ ಸಮಿತಿಯ ಶಿಫಾರಸ್ಸಿನಂತೆ ಅಗ್ನಿಶಾಮಕ ದಳದ ಡಿಜಿಯಾಗಿ ವರ್ಗಾವಣೆ ಮಾಡಿತ್ತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯು ವರ್ಮಾವರನ್ನು ಸಿಬಿಐ ಮುಖ್ಯಸ್ಥನ ಹುದ್ದೆಯಿಂದ ತೆರವುಗೊಳಿಸಿತ್ತು. ನ್ಯಾಯಮೂರ್ತಿ ಎ.ಕೆ.ಸಿಕ್ರಿ ಮತ್ತು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಮಿತಿಯ ಸದಸ್ಯರಾಗಿದ್ದಾರೆ.

ಅಲೋಕ್ ವರ್ಮಾರನ್ನು ಸಿಬಿಐ ಮುಖ್ಯಸ್ಥನ ಹುದ್ದೆಯಿಂದ ತೆರವುಗೊಳಿಸುವ ಮೊದಲು ಅವರ ವಿರುದ್ಧ ಐದು ಆರೋಪಗಳನ್ನು ಪಟ್ಟಿ ಮಾಡಿದೆ.

ಸಿಬಿಐನ ನಿರ್ಗಮಿತ ಮುಖ್ಯಸ್ಥ ಅಲೋಕ್ ವರ್ಮಾ ಸಿಬಿಐ ಮುಖ್ಯಸ್ಥನಾಗಿ ತಾನು ಸಂಸ್ಛೆಯ ಸಮಗ್ರತೆ ಕಾಪಾಡಲು ಪ್ರಯತ್ನಿಸಿದ್ದೆ,  ಆದರೆ ಬಾಹ್ಯ ಒತ್ತಡದಿಂದಾಗಿ ಕೆಲವು ಪ್ರಯತ್ನ ವಿಫಲಗೊಂಡಿತು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News