ಗಡಿ ನಿಯಂತ್ರಣಾ ರೇಖೆ ಬಳಿ ಐಇಡಿ ಸ್ಫೋಟ; ಕೇರಳ ಮೂಲದ ಮೇಜರ್ ಶಶೀಧರನ್ ಹುತಾತ್ಮ

Update: 2019-01-12 05:49 GMT

ಶ್ರೀನಗರ, ಜ.12: ಜಮ್ಮು ಮತ್ತು ಕಾಶ್ಮೀರದ ರಾಜೋರಿ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆ ಬಳಿ ಉಗ್ರರು ಐಇಡಿ ಸ್ಫೋಟಿಸಿದ ಪರಿಣಾಮವಾಗಿ ಭಾರತೀಯ  ಸೇನೆಯ ಮೇಜರ್  ಕೇರಳ ಮೂಲದ ಶಶೀಧರನ್ ವಿ ನಾಯರ್ ಹುತಾತ್ಮರಾಗಿದ್ದಾರೆ.

ಗಡಿಯಲ್ಲಿ ಕರ್ತವ್ಯ ನಿರತ ಭಾರತೀಯ ಸೇನೆಯನ್ನು ಗುರಿಯಾಗಿರಿಸಿ ಶಂಕಿತ ಉಗ್ರರು ಎಲ್ ಒಸಿ ಬಳಿ ಇರುವ ಕಾಲು ದಾರಿಯಲ್ಲಿ ಸುಧಾರಿತ ಸ್ಫೋಟಕ ಬಾಂಬ್ ನ್ನು (ಐಇಡಿ) ಇರಿಸಿದ್ದರು. ಬಾಂಬ್ ಸ್ಫೋಟದಿಂದ ಮೇಜರ್  ಶಶೀಧರನ್ ಸೇರಿದಂತೆ ಭಾರತದ ಇಬ್ಬರು ಯೋಧರು ಗಂಭೀರ  ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದರು. ಈ ಪೈಕಿ ಶಶೀಧರನ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

33ರ ಹರೆಯದ ಶಶೀಧರನ್  2/11 ಗೂರ್ಖಾ ರೈಫಲ್ ಗೆ ಸೇರಿದವರು.  ಸದ್ಯ ಪುಣೆಯ ನಿವಾಸಿಯಾಗಿರುವ ಶಶೀಧರನ್  ಅವರು ಪತ್ನಿ ತೃಪ್ತಿ ಶಶೀಧರನ್  ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News