ಆಗಸದಿಂದ ಧರೆಗಿಳಿದ ರಾಶಿ ರಾಶಿ ಜೇಡಗಳು: ಬೆಚ್ಚಿ ಬಿದ್ದ ಜನರು

Update: 2019-01-15 10:41 GMT

ಮಿನಾಸ್ ಗೆರೈಸ್, ಜ. 15: ದಕ್ಷಿಣ ಬ್ರೆಝಿಲ್ ನ ಮಿನಾಸ್ ಗೆರೈಸ್ ಎಂಬ ಪಟ್ಟಣದ ನಾಗರಿಕರಿಗೆ ಇತ್ತೀಚೆಗೆ  ಭಯ ಹುಟ್ಟಿಸುವಂತಹ ವಿದ್ಯಮಾನ ನಡೆದಿತ್ತು. ಆಗಸದಿಂದ ಜೇಡಗಳ ರಾಶಿ ರಾಶಿ ಧರೆಗೆ ಬೀಳುತ್ತಿರುವಂತೆ ಕಂಡು ಅವರೆಲ್ಲರೂ ದಂಗಾಗಿದ್ದರು. ತಮಗೆ ಮುಂದೇನು ಕಾದಿದೆಯೋ ಎಂದೂ ಚಿಂತಾಕ್ರಾಂತರಾಗಿದ್ದರು.

ಈ ವಿಚಿತ್ರ ದೃಶ್ಯಾವಳಿಯನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದ ನಾಗರಿಕರೊಬ್ಬರು ತಾವು ಸಾವೋ ಪೌಲೋದ ಸಮೀಪವಿರುವ ತಾತನ ಮನೆಗೆ ಹೊರಟಿದ್ದಾಗ ಈ ಜೇಡಗಳು ಕಪ್ಪು ಚುಕ್ಕೆಗಳಂತೆ ಆಗಸದಲ್ಲಿ ಗೋಚರಿಸಿದ್ದವು ಎಂದಿದ್ದಾರೆ.

ವಾಸ್ತವವಾಗಿ ಈ ಜೇಡಗಳು ಭೂಮಿಗೆ ಬೀಳುತ್ತಿರಲಿಲ್ಲ, ಬದಲಾಗಿ ಭಾರೀ ಗಾತ್ರದ  ಬಲೆಯಲ್ಲಿ ನೇತಾಡುತ್ತಿದ್ದವು. ಅತ್ಯಂತ ವಿರಳ ಜಾತಿಯ (ಪರವಿಕ್ಸಿಯಾ ಬಿಸ್ಟ್ರಿಯಾಟ) ಜೇಡ ಇವಾಗಿದ್ದವು. ಇವುಗಳು ನೇಯುವ ಬಲೆಗಳು ಬರಿಗಣ್ಣಿಗೆ ಕಾಣಿಸುವುದಿಲ್ಲ, ಈ ಜೇಡಗಳು ಮನುಷ್ಯರಿಗೆ ಯಾವುದೇ ರೀತಿ ಸಮಸ್ಯೆ ಸೃಷ್ಟಿಸುವುದಿಲ್ಲ, ಬದಲಾಗಿ ನೊಣ ಹಾಗೂ ನುಸಿಗಳನ್ನು ನಿಯಂತ್ರಣದಲ್ಲಿಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News