ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ: ಫೆ.14 ರಿಂದ ವಿಮಾನ ಹಾರಾಟ ನಿರ್ಬಂಧ

Update: 2019-01-15 16:31 GMT
ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು, ಜ.15: ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಅಂತರ್‌ರಾಷ್ಟ್ರೀಯ ವೈಮಾನಿಕ ಪ್ರದರ್ಶನ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟವನ್ನು ನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ದೇಶ-ವಿದೇಶ ಸೇವಾ ವಿಮಾನಗಳು, ಹೆಲಿಕಾಪ್ಟರ್‌ಗಳು ಫೆ.20ರಿಂದ 24ರ ನಡುವೆ ಪ್ರದರ್ಶನ ನೀಡಲಿದೆ. ಇದಕ್ಕೂ ಮುನ್ನ ಪೂರ್ವಭಾವಿ ತಾಲೀಮು ನಡೆಸಲಿದೆ. ಈ ವೇಳೆ ಕೆಐಎಗೆ ಆಗಮಿಸುವ ಹಾಗೂ ಕೆಐಎನಿಂದ ನಿರ್ಗಮಿಸುವ ನಾಗರಿಕ ವಿಮಾನಗಳ ಹಾರಾಟಕ್ಕೆ ತೊಡಕುಂಟಾಗುವ ಸಾಧ್ಯತೆ ಇರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ.

ಫೆ.14ರಿಂದ 24ರ ನಡುವೆ ನಿರ್ದಿಷ್ಟ ಅವಧಿಗೆ ಕೆಐಎ ವಾಯುಪ್ರದೇಶವನ್ನು ನಾಗರಿಕ ವಿಮಾನಗಳ ಹಾರಾಟಕ್ಕೆ ಬಂದ್ ಮಾಡಲಾಗುತ್ತದೆ. ಈ ಪೈಕಿ ಫೆ.14 ರಿಂದ ಫೆ.19ರ ನಡುವೆ ತಾಲೀಮು ನಡೆಸುವ ಕಾರಣ ಮಧ್ಯಾಹ್ನ 1.20ರಿಂದ 4.30ರ ನಡುವೆ ವಾಯು ಪ್ರದೇಶ ನಿರ್ಬಂಧ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಿಮಾನ ಹಾರಾಟ ನಿರ್ಬಂಧ ಅವಧಿ: ಫೆ.14 ರಿಂದ ಫೆ.19ರವರೆಗೆ ಮಧ್ಯಾಹ್ನ 1.20ರಿಂದ ಸಂಜೆ 4.30, ಫೆ.20ರಂದು ಬೆಳಗ್ಗೆ 8.20ರಿಂದ ಮಧ್ಯಾಹ್ನ 12 ಗಂಟೆ, ಫೆ.21 ರಿಂದ ಫೆ.24ರವರೆಗೆ ಬೆ.9.50 ರಿಂದ ಮಧ್ಯಾಹ್ನ 12 ಗಂಟೆ, ಮಧ್ಯಾಹ್ನ 1.50ರಿಂದ ಸಂಜೆ 5 ಗಂಟೆವರೆಗೂ ವಿಮಾನ ಹಾರಾಟ ನಿರ್ಬಂಧವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News