ಬದಲಿ ಶಾಲೆ ಮಕ್ಕಳ ದಾಖಲಾತಿಗೆ ಖಾಸಗಿ ಶಾಲೆಗಳು ಹಿಂದೇಟು ?

Update: 2019-01-15 16:13 GMT

ಬೆಂಗಳೂರು, ಜ.15: ನಗರದ ಬಹುತೇಕ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಗೆ ಪ್ರವೇಶ ಮುನ್ನ ತಮ್ಮ ಶಾಲೆಗಳಲ್ಲಿ ಕಲಿತ ಮಕ್ಕಳಿಗೆ ಆದ್ಯತೆ ನೀಡುತ್ತಿದ್ದು, ಹೊಸ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಒಪ್ಪುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ.

ಖಾಸಗಿ ಶಾಲೆಗಳು ನಿಮ್ಮ ಮಕ್ಕಳನ್ನು ಇಲ್ಲಿಯೇ ನರ್ಸರಿಗೆ ದಾಖಲಿಸಿ ಎಂದು ಒತ್ತಾಯ ಮಾಡುತ್ತಿರುವುದು ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ. ನಾವು ಮಕ್ಕಳನ್ನು ಮನೆ ಹತ್ತಿರದ ಮಾಂಟೆಸ್ಸರಿ ಶಾಲೆಗೆ ಕಳುಹಿಸಿದ್ದು, ಈ ವರ್ಷ ಒಂದನೇ ತರಗತಿಗೆ ಕಳುಹಿಸಬೇಕು. ಹೀಗಾಗಿ, ಐದಾರು ಖಾಸಗಿ ಶಾಲೆಗಳಿಗೆ ಭೇಟಿ ನೀಡಿದ್ದೆವು. ಆದರೆ, ಅಲ್ಲಿ ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳಿದ್ದಾರೆ, ಸೀಟು ಇಲ್ಲ ಎಂದು ಕಳಿಸಿದ್ದಾರೆ ಎಂದು ಪೋಷಕರೊಬ್ಬರು ಹೇಳಿದ್ದಾರೆ.

ವರ್ಷದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಮನೆ ಬದಲಾವಣೆ ಮಾಡುತ್ತೇವೆ. ಹೀಗಾಗಿ, ಸ್ಥಳೀಯವಾಗಿ ಸಿಗುವ ಶಾಲೆಗಳಿಗೆ ದಾಖಲಿಸಬೇಕು ಎಂದುಕೊಳ್ಳುತ್ತೇವೆ. ಆದರೆ, ಬೇರೆ ಶಾಲೆಯಿಂದ ಬರುವ ಮಕ್ಕಳಿಗೆ ಅವಕಾಶ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರ ಸೂಚಿಸಿದ ವಯಸ್ಸಿಗೆ ಅನುಗುಣವಾಗಿ ಶಾಲೆಗಳು ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಬೇಕು. ಪೋಷಕರಿಗೆ ಅದೇ ಶಾಲೆ ಬೇಕೆಂದರೆ ನರ್ಸರಿಯಿಂದಲೇ ದಾಖಲಾತಿ ಮಾಡಿಕೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಹಯೋಗ ಮಂಡಳಿಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News