ಕ್ಯಾನ್ಸರ್ ಚಿಕಿತ್ಸೆಗಾಗಿ ನ್ಯೂಯಾರ್ಕ್ ಗೆ ತೆರಳಿದ ಜೇಟ್ಲಿ: ಬಜೆಟ್‍ಗೆ ಗೈರು?

Update: 2019-01-16 11:04 GMT

ಹೊಸದಿಲ್ಲಿ, ಜ.16: ಕ್ಯಾನ್ಸರ್ ಚಿಕಿತ್ಸೆಗಾಗಿ ನ್ಯೂಯಾರ್ಕ್ ಗೆ ತೆರಳಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ಮಂಡಿಸುವ ಪ್ರಸಕ್ತ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್ ಮಂಡನೆಗೆ ವಾಪಸ್ಸಾಗುವುದು ಅನುಮಾನ ಎಂದು thewire.in ವರದಿ ಮಾಡಿದೆ. ಫೆಬ್ರವರಿ 1ರಂದು ಬಜೆಟ್ ಮಂಡನೆಗೆ ದಿನ ನಿಗದಿಪಡಿಸಲಾಗಿದೆ. ಆದರೆ ತೀವ್ರ ಅಸ್ವಸ್ಥರಾಗಿರುವ ಜೇಟ್ಲಿ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ನಿರೀಕ್ಷೆ ಇದೆ.

ಮೆದು ಕೋಶ ಎಂದು ಹೇಳಲಾಗುವ ಒಂದು ಬಗೆಯ ಟ್ಯೂಮರ್ ಇದಾಗಿದ್ದು, ಇದು ದೇಹದ ಇತರ ಭಾಗಗಳಿಗೆ ಕ್ಷಿಪ್ರವಾಗಿ ಹರಡುತ್ತದೆ. ಕಳೆದ ವರ್ಷ ಕಿಡ್ನಿ ಕಸಿಗೆ ಒಳಗಾದ ಜೇಟ್ಲಿಯವರು ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದು, ಇದು ಹೆಚ್ಚು ಸಂಕೀರ್ಣ ಚಿಕಿತ್ಸೆಯಾಗಿದೆ. ಶಸ್ತ್ರಚಿಕಿತ್ಸೆ ಜತೆಗೆ ಕಿಮೋಥೆರಪಿಗೂ ಒಳಗಾಗಬೇಕಿದ್ದು, ಇದು ಮತ್ತೆ ಕಿಡ್ನಿ ಮೇಲಿನ ಒತ್ತಡ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸದ್ಯಕ್ಕೆ ಅವರ ದೇಹಸ್ಥಿತಿ ಇದನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಮೂಲಗಳು ಹೇಳಿವೆ.

ಅಧಿಕೃತ ಮೂಲಗಳ ಪ್ರಕಾರ, ಹಣಕಾಸು ಸಚಿವರು ಎರಡು ವಾರಗಳ ವೈಯಕ್ತಿಕ ರಜೆ ಪಡೆದು ನ್ಯೂಯಾರ್ಕ್ ಗೆ ಚಿಕಿತ್ಸೆಗೆ ತೆರಳಿದ್ದಾರೆ ಎಂದು thewire.in ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News