ಲಡಾಖ್‌ನಲ್ಲಿ ಹಿಮಪಾತ: ಮೂವರು ಬಲಿ; ಏಳು ಜನ ಸಿಲುಕಿರುವ ಶಂಕೆ

Update: 2019-01-18 07:22 GMT

ಜಮ್ಮು,ಜ.18: ಜಮ್ಮು-ಕಾಶ್ಮೀರದ ಲಡಾಖ್‌ನ ಖಾರ್‌ದುಂಗ ಲಾ ಪಾಸ್‌ನಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಹಿಮಪಾತದಲ್ಲಿ ಕನಿಷ್ಠ 3 ಮಂದಿ ಸಾವನ್ನಪ್ಪಿದ್ದು, 7 ಮಂದಿ ಸಿಲುಕಿರುವ ಶಂಕೆಯಿದೆ.

ವಿಶ್ವದ ಅತ್ಯಂತ 17,500 ಅಡಿ ಎತ್ತರದ ರಸ್ತೆಯ ಮೇಲೆ ಸಂಭವಿಸಿದ ಹಿಮಪಾತಕ್ಕೆ ಹಲವು ವಾಹನಗಳು ಸಿಲುಕಿವೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ಪಡೆ ಘಟನಾ ಸ್ಥಳಕ್ಕೆ ಧಾವಿಸಿವೆ. ಈ ಪ್ರದೇಶ ಲೇಹ್ ಪಟ್ಟಣದಿಂದ 40 ಕಿ.ಮೀ.ದೂರದಲ್ಲಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಸ್ಕಾರ್ಪಿಯೋ ವಾಹನಕ್ಕೆ ದೈತ್ಯ ಗಾತ್ರದ ಹಿಮಗಡ್ಡೆಯ ಗೋಡೆಯೊಂದು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News