ನೀತಿ ಆಯೋಗದ ಸುಳ್ಳು ಅಂಕಿ-ಅಂಶಗಳು ಆಧಾರದಲ್ಲಿ ಅತ್ಯಧಿಕ ಪ್ರಗತಿ ಎಂದ ಬಿಜೆಪಿ

Update: 2019-01-19 15:04 GMT

ಹೊಸದಿಲ್ಲಿ,ಜ.19: ಎನ್‌ಡಿಎ ಆಡಳಿತದಡಿ ಅತ್ಯಂತ ಹೆಚ್ಚಿನ ಪ್ರಗತಿ ದರವನ್ನು ಸಾಧಿಸಲಾಗಿದೆ ಎಂಬ ಆಡಳಿತ ಬಿಜೆಪಿಯ ಹೇಳಿಕೆಯನ್ನು ಶನಿವಾರ ತಿರಸ್ಕರಿಸಿರುವ ಮಾಜಿ ವಿತ್ತಸಚಿವ ಪಿ.ಚಿದಂಬರಂ ಅವರು,ಅದು ನೀತಿ ಆಯೋಗವು ಒದಗಿಸಿದ್ದ ಸುಳ್ಳು ಅಂಕಿಅಂಶಗಳನ್ನು ಆಧರಿಸಿದೆ ಎಂದು ಹೇಳಿದ್ದಾರೆ.

ಬಿಜೆಪಿಯ ಹೇಳಿಕೆಯನ್ನು ಪ್ರತಿಷ್ಠಿತ ಆರ್ಥಿಕ ತಜ್ಞರು ಮತ್ತು ಅಂಕಿಅಂಶ ತಜ್ಞರು ತಿರಸ್ಕರಿಸಿದ್ದಾರೆ ಎಂದೂ ಚಿದಂಬರಂ ಟ್ವೀಟಿಸಿದ್ದಾರೆ.

 ಕಳೆದ ವರ್ಷ ಬಿಡುಗಡೆಗೊಳಿಸಲಾಗಿದ್ದ ಕೇಂದ್ರ ಅಂಕಿಅಂಶ ಕಚೇರಿ ಮತ್ತು ರಾಷ್ಟ್ರಿಯ ಅಂಕಿಅಂಶ ಆಯೋಗ ಸಮಿತಿಯ ದತ್ತಾಂಶಗಳು ಮಾತ್ರ ವಿಶ್ವಾಸಾರ್ಹವಾಗಿವೆ ಎಂದು ಅವರು ಹೇಳಿದ್ದಾರೆ.

ಯುಪಿಎ ಅಧಿಕಾರದ ಮೊದಲ ಅವಧಿ ಸ್ವಾತಂತ್ರ್ಯಾ ನಂತರ ಅತ್ಯುತ್ತಮ ಬೆಳವಣಿಗೆಯ ವರ್ಷಗಳಾಗಿದ್ದವು ಎಂದೂ ಅವರು ತಿಳಿಸಿದ್ದಾರೆ.

ಇನ್ನೋರ್ವ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರೂ ಕೇಂದ್ರದ ಆರ್ಥಿಕ ನೀತಿಗಳನ್ನು ಟೀಕಿಸಿದ್ದಾರೆ.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭಾರತದ ಸಾಲವು ಶೇ.50ರಷ್ಟು ಏರಿಕೆಯಾಗಿ 82 ಲ.ಕೋ.ರೂ. ಆಗಿದೆ. ನಿಯಂತ್ರಣವಿಲ್ಲದ ಖರ್ಚು ಮತ್ತು ಭವಿಷ್ಯದ ಸರಕಾರಗಳಿಗಾಗಿ ಸಾಲಬಾಧ್ಯತೆಗಳ ಸೃಷ್ಟಿ ಅವರ ತಥಾಕಥಿತ ‘ಗುಜರಾತ್ ಮಾದರಿ’ಯ ಮುಖ್ಯ ವೈಶಿಷ್ಟಗಳಾಗಿವೆ ಎಂದು ಅವರು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News