ಸರಕಾರದ ಯೋಜನೆಗಳ ಕುರಿತು ಪದ್ಯಗಳನ್ನು ರಚಿಸಿ: ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕರೆ

Update: 2019-01-20 16:28 GMT

ಹೊಸದಿಲ್ಲಿ,ಜ.20: ಸಾರ್ವತ್ರಿಕ ಚುನಾವಣೆಗಳು ಸನ್ನಿಹಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರಕಾರದ ಯೋಜನೆಗಳನ್ನು ಉತ್ತೇಜಿಸಲು ಪದ್ಯಗಳನ್ನು ರಚಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಅಕ್ಷರಾನುಕ್ರಮಣಿಕೆಯಲ್ಲಿ ಸರಕಾರದ ಯೋಜನೆಗಳನ್ನು ಪಟ್ಟಿ ಮಾಡುವಂತೆ ಮತ್ತು ಈ ಯೋಜನೆಗಳ ಕುರಿತು ಪ್ರಾದೇಶಿಕ ಭಾಷೆಗಳಲ್ಲಿ ಪದ್ಯಗಳನ್ನು ಕಟ್ಟಿ ಜನರನ್ನು ತಲುಪುವಂತೆ ಅವರು ಸೂಚಿಸಿದ್ದಾರೆ.

ವೀಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಮೋದಿ,ಆಯುಷ್ಮಾನ್ ಭಾರತಕ್ಕಾಗಿ ‘ಎ’,ಬೇಟಿ ಬಚಾವೊ ಬೇಟಿ ಪಡಾವೊಕ್ಕಾಗಿ ‘ಬಿ’,ಕ್ಲೀನ್ ಗಂಗಾ ಅಭೀಯಾನಕ್ಕಾಗಿ ‘ಸಿ‘ ಹೀಗೆ ಅಕ್ಷರಾನುಕ್ರಮಣಿಕೆಯಲ್ಲಿ ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರಗಳ ಯೋಜನೆಗಳನ್ನು ಪಟ್ಟಿಮಾಡಿ. ಇವುಗಳನ್ನು ಸುಲಭವಾಗಿ ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಕೃಷಿಕರು ಮತ್ತು ರೈತರಿಗಾಗಿ ಎಲ್ಲ ರಾಜ್ಯ ಮತ್ತು ಕೇಂದ್ರ ಯೋಜನೆಗಳ ಪ್ರತ್ಯೇಕ ಪಟ್ಟಿಗಳನ್ನು ಸಿದ್ಧಗೊಳಿಸುವಂತೆ ಅವರು ಸೂಚಿಸಿದರು.

ಕೇಂದ್ರದ ಯೋಜನೆಗಳನ್ನು ಆಧರಿಸಿ,ಶಂಕರ ಮಹದೇವನ್ ಅವರ ‘ಬ್ರೀಥ್‌ಲೆಸ್’ಹಾಡಿನ ಸುಧಾರಿತ ಆವೃತ್ತಿಯ ವೀಡಿಯೊವನ್ನು ತೋರಿಸಿದ ಮೋದಿ,ಇದೇ ಮಾದರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳನ್ನು ಜನಪ್ರಿಯಗೊಳಿಸಲು ಸ್ಥಳೀಯ ಭಾಷೆಗಳಲ್ಲಿ ಹಾಡುಗಳನ್ನು ರಚಿಸುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News