ಕಿರ್ಚ್ ಜಲಸಂಧಿಯಲ್ಲಿ 2 ಹಡಗುಗಳಲ್ಲಿ ಆಕಸ್ಮಿಕ ಬೆಂಕಿ ; 11 ಸಾವು

Update: 2019-01-22 04:49 GMT

ಮಾಸ್ಕೋ, ಜ.22: ರಶ್ಯದ ಕಿರ್ಚ್ ಜಲಸಂಧಿಯಲ್ಲಿ ತೈಲ ಸಾಗಾಟದ  ಟಾಂಝಾನಿಯಾದ ಎರಡು ಹಡಗುಗಳಿಗೆ  ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮವಾಗಿ ಹಡಗಿನಲ್ಲಿದ್ದ ಭಾರತ, ಟರ್ಕಿ  ಮತ್ತು ಲಿಬಿಯಾದ  ಒಟ್ಟು 11 ಮಂದಿ  ಮೃತಪಟ್ಟ ಘಟನೆ ವರದಿಯಾಗಿದೆ.

 ಟಾಂಝಾನಿಯಾಕ್ಕೆ ಸೇರಿದ ಎರಡು ಹಡಗುಗಳು ಸಮುದ್ರದಲ್ಲಿ,  ಒಂದು ಹಡಗಿನಿಂದ  ಇನ್ನೊಂದಕ್ಕೆ ದ್ರವೀಕೃತ ನೈಸರ್ಗಿಕ ಗ್ಯಾಸ್ ನ್ನು ರವಾನಿಸುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು ಎನ್ನಲಾಗಿದೆ. ಹಡಗುಗಳಿಗೆ ಬೆಂಕಿ ಹತ್ತಿಕೊಂಡ ಪರಿಣಾಮವಾಗಿ 11 ಮಂದಿ ಮೃತಪಟ್ಟರು ಎಂದು ರಶ್ಯದ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಡಗುಗಳು  ಬೆಂಕಿಯಿಂದ ಧಗ ಧಗನೆ ಉರಿಯುತ್ತಿದ್ದಾಗ  ಹಡಗಿನಲ್ಲಿದ್ದ ಹಲವು ಮಂದಿ  ಅಧಿಕ ಮಂದಿ ನಾವಿಕರು ರಕ್ಷಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದಾರೆ . ಈ ಪೈಕಿ 12 ಮಂದಿಯನ್ನು ರಕ್ಷಿಸಲಾಗಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಒಂದು ಹಡಗಿನಲ್ಲಿ ಟರ್ಕಿಯ 7, ಭಾರತದ 7 ಮತ್ತು ಲಿಬಿಯಾದ  ಓರ್ವ ಪ್ರಜೆ ಸೇರಿದಂತೆ 15 ಮಂದಿ , ಇನ್ನೊಂದು ಹಡಗಿನಲ್ಲಿ ಟರ್ಕಿಯ 9 ಮತ್ತು ಭಾರತದ 8 ಮಂದಿ ಪ್ರಜೆಗಳು  ಸೇರಿದಂತೆ 17 ಮಂದಿ ಪ್ರಯಾಣಿಸುತ್ತಿದ್ದರೆಂದು  ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News