ಯುಡಿಎಫ್ ಅವಿಶ್ವಾಸ ನಿರ್ಣಯ ಬೆಂಬಲಿಸಿದ ಬಿಜೆಪಿ; ತೊಡುಪುಝ ನಗರಸಭೆ ಅಧಿಕಾರ ಕಳೆದುಕೊಂಡ ಎಲ್‍ಡಿಎಫ್

Update: 2019-01-26 09:33 GMT

ತೊಡುಪುಝ (ಕೇರಳ),ಜ.26: ಇಲ್ಲಿನ ನಗರಸಭೆಯಲ್ಲಿ ಎಲ್‍ಡಿಎಫ್ ಅಧಿಕಾರ ಕಳಕೊಂಡಿದೆ. ಯುಡಿಎಫ್ ಅವಿಶ್ವಾಶ ನಿರ್ಣಯವನ್ನು ಬಿಜೆಪಿ ಬೆಂಬಲಿಸಿದ್ದರಿಂದ ಆರು ತಿಂಗಳ ಎಡಪಕ್ಷದ ಅಧಿಕಾರ ಕೊನೆಗೊಂಡಿದೆ. ಯುಡಿಎಫ್‍ನ 14 ಸದಸ್ಯರು ಮತ್ತು ಬಿಜೆಪಿ ಎಂಟು ಸದಸ್ಯರು ಸೇರಿಒಟ್ಟು 22 ಮಂದಿ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಿದ್ದು, ಎಲ್‍ಡಿಎಫ್ ಅವಿಶ್ವಾಸ ನಿರ್ಣಯವನ್ನು ಬಹಿಷ್ಕರಿಸಿ ಮತದಾನದಲ್ಲಿ ಭಾಗವಹಿಸಿಲ್ಲ.

 ಆರು ತಿಂಗಳ ಹಿಂದೆ ಯುಡಿಎಫ್ ಕರಾರಿನಂತೆ ಮುಸ್ಲಿಂ ಲೀಗಿನ ಸಫಿಯಾ ಜಬ್ಬಾರ್ ರಾಜೀನಾಮೆ ನೀಡಿದ್ದರು. ನಂತರ ನಡೆದ ಮತದಾನದಲ್ಲಿ ಕಾಂಗ್ರೆಸ್ ಸದಸ್ಯ ಉಪಾಧ್ಯಕ್ಷ ಸುಧಾಕರನ್ ನಾಯರ್‍ರ ಮತ ಅಸಿಂಧು ಆಗಿತ್ತು. ನಂತರ ಸಮಾನ ಮತ ಸಿಕ್ಕಿದ್ದರಿಂದ ಚೀಟಿ ಎತ್ತಲಾಗಿದ್ದು ಎಡಪಕ್ಷದ ಕೌನ್ಸಿಲರ್ ಮಿನಿಮಧು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೆ ಮುಸ್ಲಿಂಲೀಗಿನ ಸಿ.ಕೆ. ಜಾಫರ್‍ಗೆ ಅಧ್ಯಕ್ಷ ಹೊಣೆಗಾರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News