ಕೇರಳ ಪ್ರವಾಹ ವೇಳೆ ಇಬ್ಬರು ಗರ್ಭಿಣಿಯರನ್ನು ರಕ್ಷಿಸಿದ್ದ ಪೈಲಟ್‍ ಗೆ ನಾವೊ ಸೇನಾ ಪದಕ

Update: 2019-01-27 07:43 GMT

ಹೊಸದಿಲ್ಲಿ, ಜ.27: ರಾಜಧಾನಿಯಲ್ಲಿ ನಡೆದ 70ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಕ್ಷಣಾ ಪಡೆಯ ಪ್ರತಿಷ್ಠಿತ ನಾವೊ ಸೇನಾ ಪದಕಗಳನ್ನು ಘೋಷಿಸಲಾಗಿದೆ.

ಕೇರಳ ಪ್ರವಾಹದ ವೇಳೆ ಇಬ್ಬರು ಗರ್ಭಿಣಿಯರನ್ನು ವೈಮಾನಿಕ ಕಾರ್ಯಾಚರಣೆಯಲ್ಲಿ ರಕ್ಷಿಸಿದ್ದ ನೌಕಾಪಡೆಯ ಪೈಲಟ್ ಕ್ಯಾಪ್ಟನ್ ವಿಜತ್ ವರ್ಮಾ ಅವರಿಗೆ ಶೌರ್ಯ ಪ್ರಶಸ್ತಿ ನೀಡಲಾಗಿದೆ. ಇತರ ವಿಜೇತರಲ್ಲಿ, ವಿಶ್ವ ಜಲಯಾನ ಕೈಗೊಂಡ ಅಭಿಲಾಶ್ ಟೋಮಿ ಸೇರಿದ್ದಾರೆ. ಕರ್ತವ್ಯಕ್ಕೆ ಸಮರ್ಪಿಸಿಕೊಂಡ ಕಾರಣಕ್ಕಾಗಿ ಇವರಿಗೆ ಪ್ರಶಸ್ತಿ ನೀಡಲಾಗಿದೆ.

ಕ್ಯಾಪ್ಟನ್ ವಿಜಯ್ ವರ್ಮಾ ಇಬ್ಬರು ಗರ್ಭಿಣಿಯರನ್ನು ಸುರಕ್ಷಿತವಾಗಿ ಪಾರು ಮಾಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೇರಳ ಪ್ರವಾಹ ಸಂದರ್ಭದಲ್ಲಿ ಅವರು ಹೀರೊ ಆಗಿ ಬಿಂಬಿತರಾಗಿದ್ದರು.

ವಿಜಯ್ ವರ್ಮಾ ಐಎನ್‍ಎಸ್ ಗರುಡಾದಲ್ಲಿ 2011ರ ಆಗಸ್ಟ್‍ನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇರಳ ಪ್ರವಾಹದ ವೇಳೆ ಅವರು, ಆಪರೇಷನ್ ಮದ್ ಕಾರ್ಯಾಚರಣೆಯ ಭಾಗವಾಗಿದ್ದರು. ಚೇತಕ್ ವಿಮಾನದ ಮೂಲಕ ಅವರು ಇಬ್ಬರು ಮಹಿಳೆಯರು ಸೇರಿದಂತೆ 24 ಮಂದಿಯನ್ನು ರಕ್ಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News