ಮೋದಿ ತಮಿಳುನಾಡು ಭೇಟಿಗೆ ತೀವ್ರ ವಿರೋಧ: ಟ್ವಿಟರ್ ನಲ್ಲಿ #GoBackModi ಟ್ರೆಂಡಿಂಗ್

Update: 2019-01-27 11:10 GMT

ಚೆನ್ನೈ, ಜ.27: ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಉದ್ಘಾಟನೆಗಾಗಿ ಪ್ರಧಾನಿ ಮೋದಿ ತಮಿಳುನಾಡಿಗೆ ಆಗಮಿಸಿರುವ ನಡುವೆಯೇ ಟ್ವಿಟರಿಗರ ನಡುವೆ ಹ್ಯಾಶ್ ಟ್ಯಾಗ್ ಜಗಳ ಜೋರಾಗಿದೆ.

#GoBackModi, #GoBackSadistModi ಎನ್ನುವ ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದ್ದರೆ, ಇನ್ನೊಂದೆಡೆ ಮೋದಿ ಅಭಿಮಾನಿಗಳ #MaduraiThanksModi and #TNWelcomesModi  ಎನ್ನು ಹ್ಯಾಶ್ ಟ್ಯಾಗ್ ಗಳೂ ಕೂಡ ಟ್ರೆಂಡಿಂಗ್ ನಲ್ಲಿದೆ.

3 ಲಕ್ಷ ಮಂದಿಯನ್ನು ನಿರ್ವಸಿತರನ್ನಾಗಿ ಮಾಡಿದ ‘ಗಜ’ ಚಂಡಮಾರುತ ಸಂತ್ರಸ್ತರ ಭೇಟಿಯಾಗದ ಮೋದಿ ವಿರುದ್ಧ ತಮಿಳುನಾಡು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News