ರೈಲ್ವೆ ಯಾರ್ಡ್ ನಲ್ಲಿ ಬಾಲಕಿಯ ಸಾಮೂಹಿಕ ಅತ್ಯಾಚಾರ

Update: 2019-02-02 10:12 GMT

ರೋಹ್ಟಕ್, ಫೆ.2: ಏಳು ವರ್ಷದ ಬಾಲಕಿಯನ್ನು ಅಪಹರಿಸಿದ ದುಷ್ಕರ್ಮಿಗಳು ರೋಹ್ಟಕ್ ರೈಲ್ವೆ ಯಾರ್ಡ್ ಸಮೀಪ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರಗೈದ ಘಟನೆ ವರದಿಯಾಗಿದೆ.

ಘಟನೆಯ ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸಂತ್ರಸ್ತೆ ಕಷ್ಟಪಟ್ಟು ಮನೆಗೆ ತೆರಳಿ ತನ್ನ ಹೆತ್ತವರಲ್ಲಿ ನಡೆದ ಘಟನೆಯ ಬಗ್ಗೆ ಹೇಳಿಕೊಂಡ ನಂತರ ಪೊಲೀಸ್ ದೂರು ದಾಖಲಾಗಿದೆ.

ರೈಲ್ವೆ ಪೊಲೀಸ್ ಠಾಣೆಗಿಂತ ಸುಮಾರು 300 ಮೀಟರ್ ದೂರವಿರುವ ರೈಲ್ವೆ ಯಾರ್ಡ್ ನಲ್ಲಿ ಈ ಘಟನೆ ಗುರುವಾರ ರಾತ್ರಿ ನಡೆದಿದೆ. ಆರೋಪಿಗಳಲ್ಲೊಬ್ಬನನ್ನು ಗುರುತಿಸಿದ್ದಾಗಿ ಬಾಲಕಿಯ ತಂದೆ ತನ್ನ ದೂರಿನಲ್ಲಿ ಹೇಳಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.

ಪ್ರಕರಣದ ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News