ಇರಾನ್‌ನ ನೂರಾರು ಫೇಸ್‌ಬುಕ್ ಖಾತೆಗಳ ಸ್ಥಗಿತ

Update: 2019-02-02 17:11 GMT

ಸಾನ್‌ಫ್ರಾನ್ಸಿಸ್ಕೊ, ಫೆ. 2: ಇರಾನ್‌ನ ನೂರಾರು ಫೇಸ್‌ಬುಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದಾಗಿ ಫೇಸ್‌ಬುಕ್ ತಿಳಿಸಿದೆ. ಈ ಖಾತೆಗಳನ್ನು ಬಳಸಿ 20ಕ್ಕೂ ಅಧಿಕ ದೇಶಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿತ್ತು ಎಂದು ಅದು ಹೇಳಿದೆ.

‘ಇರಾನ್‌ಗೆ ಸಂಬಂಧಿಸಿ ಸಂಘಟಿತ ಅವಿಶ್ವಾಸಾರ್ಹ ನಡವಳಿಕೆಯಲ್ಲಿ ತೊಡಗಿರುವುದಕ್ಕಾಗಿ’ 783 ಪುಟಗಳು, ಗ್ರೂಪ್‌ಗಳು ಮತ್ತು ಖಾತೆಗಳನ್ನು ತೆಗೆದುಹಾಕಲಾಗಿದೆ ಎಂದು ಜಗತ್ತಿನ ಅತಿ ದೊಡ್ಡ ಸಾಮಾಜಿಕ ಜಾಲತಾಣ ಹೇಳಿದೆ.

ವಿವಿಧ ದೇಶಗಳಲ್ಲಿ ಆ ದೇಶಗಳ ನಿವಾಸಿಗಳೆಂದು ನಕಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಸೃಷ್ಟಿಸಿ ಇರಾನ್ ಪರ ಅಭಿಯಾನದಲ್ಲಿ ಬಳಸಲಾಗಿತ್ತು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News