ಅಮೆರಿಕದಲ್ಲಿ ಶೀಘ್ರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ

Update: 2019-02-02 17:20 GMT

ವಾಶಿಂಗ್ಟನ್, ಫೆ. 2: ಅಕ್ರಮ ವಲಸಿಗರು ಅಮೆರಿಕ ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ ಮೆಕ್ಸಿಕೊ ಗಡಿಯುದ್ದಕ್ಕೂ ಗೋಡೆ ನಿರ್ಮಿಸಲು ಬೇಕಾದ ಹಣವನ್ನು ಪಡೆಯುವುದಕ್ಕಾಗಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸಂಸತ್ತು ಕಾಂಗ್ರೆಸ್‌ನ ಒಪ್ಪಿಗೆಯಿಲ್ಲದೆಯೇ ಗಡಿ ಗೋಡೆ ಕಟ್ಟಲು ರಾಷ್ಟ್ರೀಯ ತುರ್ತು ಪರಿಸ್ಥಿತಿಯು ಟ್ರಂ ಪ್‌ಗೆ ಅವಕಾಶ ನೀಡುತ್ತದೆ ಹಾಗೂ ವಿಪತ್ತು ಪರಿಹಾರ ನಿಧಿಗಳನ್ನು ಮೆಕ್ಸಿಕೊ ಗಡಿ ಗೋಡೆಗೆ ವರ್ಗಾಯಿಸಲು ಅವರಿಗೆ ಕಾರ್ಯಕಾರಿ ಅಧಿಕಾರಗಳನ್ನು ನೀಡುತ್ತದೆ.

ಗಡಿ ಭದ್ರತೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಡೆಮಾಕ್ರಟ್‌ಗಳ ಜೊತೆಗೆ ನಡೆಸುತ್ತಿರುವ ಮಾತುಕತೆಯು ಸಮಯ ನಷ್ಟವಾಗಿದೆ ಎಂದು ಸಿಬಿಎಸ್ ನ್ಯೂಸ್‌ನ ‘ಫೇಸ್ ದ ನೇಶನ್’ ಕಾರ್ಯಕ್ರಮದಲ್ಲಿ ಟ್ರಂಪ್ ಹೇಳಿದರು.

ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತುಂಬಾ ಹಠಮಾರಿ ಸ್ವಭಾವದವರಾಗಿದ್ದಾರೆ ಹಾಗೂ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News