ಪಬ್‌ಜಿ ಪ್ರತಿಮನೆಯ ದೆವ್ವ: ಗೋವಾ ಐಟಿ ಸಚಿವ

Update: 2019-02-11 05:10 GMT

ಪಣಜಿ, ಫೆ.11: ಪಬ್‌ಜಿ ಭೂತ ರಾಜ್ಯದ ಪ್ರತಿಮನೆಗಳನ್ನು ಕಾಡುತ್ತಿದ್ದು, ಪ್ಲೇಯರ್ ಅನ್‌ನೋನ್ಸ್ ಬ್ಯಾಟಲ್‌ಗ್ರೌಂಡ್ಸ್ ಆಟವನ್ನು ತಕ್ಷಣ ನಿರ್ಬಂಧಿಸಬೇಕು ಎಂದು ಗೋವಾ ಐಟಿ ಸಚಿವ ರೋಹನ್ ಖಾಂತೆ ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಓದನ್ನು ನಿರ್ಲಕ್ಷಿಸಿ, ಈ ಆಟದ ಬಲೆಗೆ ಬೀಳುತ್ತಿದ್ದಾರೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

"ಯಾವುದೇ ರಾಜ್ಯಗಳು ಪಬ್‌ಜಿ ನಿಷೇಧಿಸಲು ಕ್ರಮ ಕೈಗೊಂಡದ್ದು ನನ್ನ ಗಮನಕ್ಕೆ ಬಂದಿಲ್ಲ. ಆದರೆ ಗೋವಾದಲ್ಲಿ ಇದನ್ನು ನಿರ್ಬಂಧಿಸಲು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕಾದ ಅಗತ್ಯವಿದೆ. ಇದನ್ನು ನಿಷೇಧಿಸುವಂಥ ಕ್ರಮವನ್ನು ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತಕ್ಷಣ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ತಿಂಗಳು ಗುಜರಾತ್ ರಾಜ್ಯ ಶಿಕ್ಷಣ ಇಲಾಖೆ, ಎಲ್ಲ ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ, ಪ್ರಾಥಮಿಕ ಶಾಲೆಗಳಲ್ಲಿ ಈ ಆಟವನ್ನು ನಿಷೇಧಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತು.

ದಕ್ಷಿಣ ಕೊರಿಯಾ ಐಟಿ ಕಂಪನಿಯೊಂದು ಪಬ್‌ಜಿ ಆಟವನ್ನು ಅಭಿವೃದ್ಧಿಪಡಿಸಿದ್ದು, ಆನ್‌ಲೈನ್ ಗೇಮಿಂಗ್ ಮಾರುಕಟ್ಟೆಯಲ್ಲಿ ಅತಿಹೆಚ್ಚು ಬಿಕರಿಯಾಗುತ್ತಿರುವ ವೀಡಿಯೊ ಗೇಮ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News