ರಫೇಲ್ ಆಯ್ಕೆಯೇ ತಪ್ಪು ಎಂದ ಸಿಎಜಿ ವರದಿ

Update: 2019-02-14 10:41 GMT

ಹೊಸದಿಲ್ಲಿ, ಫೆ.14: ಯುಪಿಎ ಸರಕಾರದ ಅವಧಿಯಲ್ಲಿ ಯುದ್ಧ ವಿಮಾನ ಖರೀದಿ ಸಂದರ್ಭ ರಫೇಲ್ ಆಯ್ಕೆಯನ್ನೇ ಸಿಎಜಿ ಪ್ರಶ್ನಿಸಿದೆ. 126 ಮಲ್ಟಿ ಮೀಡಿಯಂ ರೋಲ್ ಕಾಂಬ್ಯಾಟ್ ಏರ್ ಕ್ರಾಫ್ಟ್ (ಎಂಎಂಆರ್‍ಸಿಎ)  ಖರೀದಿಯನ್ನು ಯುಪಿಎ ಅವಧಿಯಲ್ಲಿ ಅಂತಿಮಗೊಳಿಸದೇ ಇರುವಾಗ ಎನ್‍ ಡಿಎ ಸರಕಾರ 36 ರಫೇಲ್ ಯುದ್ಧ ವಿಮಾನಗಳನ್ನು 59,000 ಕೋಟಿ ರೂ. ನೀಡಿ ನೇರವಾಗಿ ಖರೀದಿಸಲು ಏಕೆ ನಿರ್ಧರಿಸಿತ್ತು ಎಂಬ ಪ್ರಶ್ನೆಗಳು ಈಗ ಮೂಡಿವೆ ಎಂದು ವರದಿ timesofindia ಮಾಡಿದೆ.

ರಫೇಲ್ ಆಯ್ಕೆಯನ್ನು ಸಿಎಜಿ ಹಲವು ವಿಚಾರಗಳಲ್ಲಿ ಟೀಕಿಸಿದೆ. ಈ ಹಿಂದೆ ಸಲ್ಲಿಸಲಾಗಿದ್ದ ತಾಂತ್ರಿಕ ಮತ್ತು ದರದ ಬಿಡ್ಡುಗಳನ್ನು  ಬದಲಾಯಿಸಲು ಡಿಫೆನ್ಸ್ ಪ್ರೊಕ್ಯೂರ್ ಮೆಂಟ್ ನಿಯಮಗಳನ್ನು ಉಲ್ಲಂಘಿಸಿ ಅನುಮತಿಸಲಾಗಿತ್ತು ಎಂದು ವರದಿ ತಿಳಿಸಿದೆ.

ವಾರಂಟಿ ಮತ್ತು ಆಪ್ಶನ್ ವಿಚಾರಗಳಲ್ಲಿ ಡಸಾಲ್ಟ್ ಸಲ್ಲಿಸಿದ ಬಿಡ್ ಸಕ್ರಮವಾಗಿರಲಿಲ್ಲ ಎಂಬುದು ಎರಡನೇ ಕಾರಣವಾಗಿದ್ದರೆ  ಪ್ರಾಯೋಗಿಕ ಹಾರಾಟಗಳ ವೇಳೆ ರಫೇಲ್ 14 ಏರ್ ಸ್ಟಾಫ್ ಕ್ವಾಲಿಟೇಟಿವ್ ಅಗತ್ಯತೆಗಳನ್ನು ಪೂರೈಸಲು ವಿಫಲವಾಗಿತ್ತು ಎಂದಿತ್ತು. ಮೂರನೆಯದಾಗಿ ನಿಗದಿತ ನಮೂನೆಯಲ್ಲಿ ದರಕ್ಕೆ ಸಂಬಂಧಿಸಿದಂತೆ ಡಸ್ಸಾಲ್ಟ್ ತನ್ನ ಬಿಡ್ ಸಲ್ಲಿಸಿರಲಿಲ್ಲ.

ಮೇಲಾಗಿ ಅಂತಿಮ ಸಂಧಾನದ ವೇಳೆ ಮೊದಲು ಪೂರೈಸಲಾಗುವ 18 ಜೆಟ್ ಗಳ ನಿರ್ವಹಣೆಗೆ ಮಾತ್ರ ಗ್ಯಾರಂಟಿ ನೀಡುವುದಾಗಿ ಹೇಳಿತ್ತಲ್ಲದೆ ತಂತ್ರಜ್ಞಾನ ವರ್ಗಾವಣೆ ನಂತರ ಉಳಿದ 108 ಜೆಟ್ ಗಳ ನಿರ್ವಹಣೆ ಜವಾಬ್ದಾರಿ ಅವುಗಳನ್ನು ನಿರ್ಮಿಸುವ ಎಚ್‍ಎಎಲ್ ಜವಾಬ್ದಾರಿಯಾಗಿದೆ ಎಂದು ಹೇಳಿತ್ತು. ಆದರೆ ಎಲ್ಲಾ 126  ಜೆಟ್ ಗಳ ಗುಣಮಟ್ಟದ ಸಂಪೂರ್ಣ ಜವಾಬ್ದಾರಿಯನ್ನು ಡಸ್ಸಾಲ್ಟ್ ಹೊರಬೇಕೆಂದು ಸಂಧಾನ ತಂಡ ಹೇಳಿದ ನಂತರ ಬಿಕ್ಕಟ್ಟು ಎದುರಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News