ಮಾಹಿತಿಯಿದ್ದರೂ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ: ಚರ್ಚೆಗೆ ಕಾರಣವಾದ ಜಮ್ಮು ಕಾಶ್ಮೀರ ರಾಜ್ಯಪಾಲರ ಹೇಳಿಕೆ

Update: 2019-02-15 09:41 GMT

ಹೊಸದಿಲ್ಲಿ, ಫೆ.15: ಗುಪ್ತಚರ ಇಲಾಖೆ ನೀಡಿದ್ದ ಮಾಹಿತಿಗಳ ಬಗ್ಗೆ ಭದ್ರತಾ ಪಡೆಗಳು ಸರಿಯಾದ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ನಿನ್ನೆ ಸಿಆರ್ ಪಿಎಫ್ ಸೈನಿಕರಿದ್ದ ಬಸ್ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಸೈನಿಕರು ಹುತಾತ್ಮರಾಗಿದ್ದಾರೆ.

“ಇದರಲ್ಲಿ ಗುಪ್ತಚರ ಇಲಾಖೆಯ ವೈಫಲ್ಯವಿಲ್ಲ, ಏಕೆಂದರೆ ನಮಗೆ ಸಂಭಾವ್ಯ ದಾಳಿಯ ಮಾಹಿತಿ ಲಭಿಸಿತ್ತು. ಆದರೆ ಅಲ್ಲಿ ಯಾವುದೋ ರೀತಿ ನಿರ್ಲಕ್ಷ್ಯ ನಡೆದಿದೆ. ಪರಿಶೀಲನೆ ನಡೆಸದೆ ಉಗ್ರರು ಅಷ್ಟೊಂದು ದೊಡ್ಡ ವಾಹನ ತರುವುದಾದರೆ ಅದು ನಮ್ಮ ಕಡೆಯಿಂದ ನಡೆದ ತಪ್ಪು” ಎಂದು ಸತ್ಯಪಾಲ್ ಮಲಿಕ್ ಹೇಳಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News