ಪುಲ್ವಾಮದಲ್ಲಿ ದಾಳಿ ನಡೆಸಿದ ಉಗ್ರನೊಂದಿಗೆ ರಾಹುಲ್: ಫೋಟೊ ತಿರುಚಿ ವಿಕೃತಿ ಮೆರೆದ ಕಿಡಿಗೇಡಿಗಳು

Update: 2019-02-15 11:03 GMT

ಹೊಸದಿಲ್ಲಿ, ಫೆ.15: ನಿನ್ನೆ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದು 40 ಸೈನಿಕರು ಹುತಾತ್ಮರಾಗಿರುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿರುವ ನಡುವೆಯೇ ಕೆಲವು ಕಿಡಿಗೇಡಿಗಳು ಈ ಘಟನೆಯನ್ನು ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ.

“ಪುಲ್ವಾಮಾ ಉಗ್ರ ದಾಳಿ ನಡೆಸಿದ ಆದಿಲ್ ಅಹ್ಮದ್ ದಾರ್ ಜೊತೆ ರಾಹುಲ್ ಗಾಂಧಿ’ ಎನ್ನುವ ಫೋಟೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈಗಾಗಲೇ ಈ ಫೋಟೊವನ್ನು ಹಲವರು ಶೇರ್ ಮಾಡಿದ್ದಾರೆ.

ಸೈನಿಕರಿದ್ದ ಬಸ್ ಮೇಲೆ ದಾಳಿ ನಡೆಸಿದ್ದ ದಾರ್ ವರ್ಷದ ಹಿಂದೆಯಷ್ಟೇ ಉಗ್ರ ಸಂಘಟನೆಗೆ ಸೇರಿದ್ದ. ಸುಮಾರು 350 ಕೆ.ಜಿ. ಸ್ಫೋಟಕಗಳಿದ್ದ ಕಾರನ್ನು ಬಸ್ ಢಿಕ್ಕಿ ಹೊಡೆಸಿ ದಾರ್ ಈ ದಾಳಿ ನಡೆಸಿದ್ದ. ಇದೀಗ ಇದೇ ಉಗ್ರನೊಂದಿಗೆ ರಾಹುಲ್ ಗಾಂಧಿಯ ಫೋಟೊ ಎನ್ನುವ ಹಸಿ ಸುಳ್ಳಿನೊಂದಿಗೆ ಫೋಟೊವನ್ನು ವೈರಲ್ ಮಾಡಲಾಗುತ್ತಿದೆ.

ಆದರೆ ಈ ಫೋಟೊ ಫೋಟೊಶಾಪ್ ನಲ್ಲಿ ತಿರುಚಿದ್ದಾಗಿದೆ. ಯೋಧರ ಬಲಿದಾನದಲ್ಲೂ ರಾಜಕೀಯ ಮಾಡುವ ಕಿಡಿಗೇಡಿಗಳು ಇನ್ನೂ ನಮ್ಮ ನಡುವೆ ಇದ್ದಾರೆ. ಹಾಗಾಗಿ ಯಾವುದೇ ಆರೋಪಗಳನ್ನು ನಂಬುವ, ಶೇರ್ ಮಾಡುವ ಮುನ್ನ ಆಲೋಚಿಸುವುದು ಒಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News