ಕರ್ನಾಟಕ-ತಮಿಳುನಾಡು ನಡುವೆ ನೂತನ ಮಾರ್ಗಗಳ ಸಂಚಾರ ಅಗತ್ಯವಿದೆ: ಶಿವಯೋಗಿ ಕಳಸದ

Update: 2019-02-15 13:55 GMT

ಬೆಂಗಳೂರು, ಫೆ.15: ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವೆ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು, ಹಾಲಿ ಇರುವ ಮಾರ್ಗಗಳಲ್ಲಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲು ಹಾಗೂ ನೂತನ ಮಾರ್ಗಗಳಲ್ಲಿ ಹೊಸದಾಗಿ ಸಾರಿಗೆಗಳನ್ನು ಪ್ರಾರಂಭಿಸಲು ಸಾರ್ವಜನಿಕ ಪ್ರಯಾಣಿಕರಿಂದ ಹೆಚ್ಚಿನ ಬೇಡಿಕೆ ಇದೆ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದರು.

ಶುಕ್ರವಾರ ಕೆಎಸ್ಸಾರ್ಟಿಸಿ ಹಾಗೂ ತಮಿಳುನಾಡು ರಾಜ್ಯಗಳ ಅಂತಾರಾಜ್ಯ ಸಾರಿಗೆ ಒಪ್ಪಂದ ಸಂಬಂಧದ ಮಾತುಕತೆಗೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಇಂದು ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವಿನ ಈ ಹಿಂದಿನ ಅಂತಾರಾಜ್ಯ ಸಾರಿಗೆ ಒಪ್ಪಂದವು 2007-08ನೇ ಸಾಲಿನಲ್ಲಿ ಏರ್ಪಟ್ಟಿದ್ದು, ನಂತರ ಈವರೆಗೆ ಯಾವುದೇ ಮಾತುಕತೆ ನಡೆದಿರಲಿಲ್ಲ. ಈಗ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಈ ವೇಳೆ ತುಮಿಳುನಾಡು ಸ್ಟೇಟ್ ಎಕ್ಸ್‌ಪ್ರೆಸ್ ಟ್ರಾನ್ಸ್‌ಪೋರ್ಟ್ ಕಾರ್ಪೋರೇಷನ್( ತುಮಿಳುನಾಡು ನಿ.) ವ್ಯವಸ್ಥಾಪಕ ನಿರ್ದೇಶಕ ಭಾಸ್ಕರನ್, ಸೇಲಂನ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ಹಾಗೂ ವಿಳ್ಳುಪುರಂ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗಣೇಶನ್ ಉಪಸ್ಥಿತರಿದ್ದರು. ಎರಡು ರಾಜ್ಯಗಳ ನಡುವೆ ನಡೆದಿರುವ ಮಾತುಕತೆಯು ಫಲಪ್ರದ ಒಪ್ಪಂದವು ಎರಡೂ ರಾಜ್ಯಗಳ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವುದೆಂದು ಹಾಗೂ ಈ ನಿಟ್ಟನಲ್ಲಿ ಎರಡೂ ರಾಜ್ಯರಸ್ತೆ ಸಾರಿಗ ಸಂಸ್ಥೆಗಳು ಮುಕ್ತ ಮನಸ್ಸಿನಿಂದ ಚರ್ಚೆ ನಡೆಸಿ, ಅಂತಿಮ ಒಪ್ಪಂದಕ್ಕೆ ಬರುವುದು ಅತೀ ಅವಶ್ಯಕವಾಗಿದೆಯೆಂದು ಕೆಎಸ್ಸಾರ್ಟಿಸಿ ಶಿವಯೋಗಿ ಸಿ ಕಳಸದ ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News