ಫೆ.17ರಂದು ಪಿಎಫ್‌ಐ ಸಂಸ್ಥಾಪನಾ ದಿನಾಚರಣೆ

Update: 2019-02-16 08:28 GMT

 ಬೆಂಗಳೂರು, ಫೆ.16: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ದ 13ನೇ ಸಂಸ್ಥಾಪನಾ ದಿನಾಚರಣೆಯು ‘ದ್ವೇಷ ರಾಜಕೀಯವನ್ನು ಸೋಲಿಸೋಣ’ ಎಂಬ ಘೋಷಣೆಯೊಂದಿಗೆ ಫೆ.17ರಂದು ನಡೆಯಲಿದೆ.

ಇದರಂಗವಾಗಿ ರಾಜ್ಯದ ಬೆಂಗಳೂರಿನ ಹೊಸಕೋಟೆ ಮತ್ತು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಪಥಸಂಚಲನ, ಏಕತಾ ರ್ಯಾಲಿಯೊಂದಿಗೆ ಸಮಾವೇಶಗಳನ್ನು ಆಯೋಜಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಮತ್ತು ‘ದ್ವೇಷ ರಾಜಕೀಯವನ್ನು ಸೋಲಿಸಿ’ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಿಎಫ್‌ಐ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News