ಪುತ್ರಿಯ ಮದುವೆ ಔತಣ ರದ್ದು ಮಾಡಿ ಹುತಾತ್ಮ ಸೈನಿಕರ ಕುಟುಂಬಕ್ಕೆ 11 ಲಕ್ಷ ರೂ. ನೀಡಿದ ವ್ಯಕ್ತಿ

Update: 2019-02-16 08:35 GMT

ಸೂರತ್, ಫೆ.16: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‍ ಪಿಎಫ್ ಸಿಬ್ಬಂದಿಗೆ ದೇಶದ ವಿವಿಧೆಡೆಗಳಿಂದ ನೆರವಿನ ಮಹಾಪೂರ ಹರಿದುಬರುತ್ತಿದೆ. ಸೂರತ್ ಉದ್ಯಮಿಯೊಬ್ಬರು ತಮ್ಮ ಮಗಳ ಅದ್ದೂರಿ ವಿವಾಹಕ್ಕೆ ಕಡಿವಾಣ ಹಾಕಿ 11 ಲಕ್ಷ ರೂಪಾಯಿಗಳನ್ನು ಹುತಾತ್ಮರ ಪರಿಹಾರಕ್ಕೆ ಮತ್ತು 5 ಲಕ್ಷ ರೂಪಾಯಿಗಳನ್ನು ಭದ್ರತಾ ಏಜೆನ್ಸಿಗಳಿಗೆ ನೀಡಿದ್ದಾರೆ.

ದೇವಶಿ ಮನೇಕ್ ಎಂಬ ವಜ್ರೋದ್ಯಮಿ ತಮ್ಮ ಮಗಳು ಅಮಿ ವಿವಾಹದ ಸಂದರ್ಭದಲ್ಲಿ ನಡೆಯಬೇಕಿದ್ದ ಔತಣವನ್ನು ರದ್ದು ಮಾಡಿ, ಈ ಹಣವನ್ನು ಸಂತ್ರಸ್ತ ಕುಟುಂಬಗಳಿಗೆ ಹಣಕಾಸು ನೆರವು ಒದಗಿಸಲು ದೇಣಿಗೆ ನೀಡಿದರು.

ಮನೇಕ್ ಅವರ ಪುತ್ರಿ ಅಮಿ ವಿವಾಹವು ಶುಕ್ರವಾರ ನಡೆಯಿತು. ಈ ವಿವಾಹದ ಔತಣ ಏರ್ಪಡಿಸುವ ಬದಲು ಈ ಹಣವನ್ನು ಉದ್ಯಮಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದರು.

ದೇಶಾದ್ಯಂತ ಹಲವು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಜನ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಯೋಧರ ಕುಟುಂಬಗಳ ಬೆಂಬಲಕ್ಕೆ ನಿಂತಿದ್ದಾರೆ. ಭಾರತ ರಾಷ್ಟ್ರೀಯ ಕಾಂಗ್ರೆಸ್, ಜಿ20 ದೇಶಗಳ ರಾಯಭಾರಿಗಳ ಗೌರವಾರ್ಥ ಏರ್ಪಡಿಸಿದ್ದ ಔತಣವನ್ನು ರದ್ದುಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News