ಪುಲ್ವಾಮ ದಾಳಿಯಿಂದ ಪಾಕಿಗೆ ಏನೂ ಲಾಭವಿಲ್ಲ: ಇಮ್ರಾನ್ ಖಾನ್

Update: 2019-02-19 08:32 GMT

    ಕರಾಚಿ, ಫೆ.19: ನಾನು ಭಾರತ ಸರಕಾರಕ್ಕೆ ಉತ್ತರ ನೀಡುತ್ತಿದ್ದೇನೆ. ಈ ದಾಳಿಯಿಂದ ಪಾಕಿಗೆ ಏನು ಲಾಭವಿದೆ?. ಯಾವುದೇ ಸಾಕ್ಷಾಧಾರಗಳಿಲ್ಲದೆ ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ. ದಾಳಿಯಲ್ಲಿ ನಾವು ಭಾಗಿಯಾಗಿರುವ ಸಾಕ್ಷ ನೀಡಿದರೆ ತಕ್ಷಣವೇ ಕ್ರಮ ಜರಗಿಸಿ, ತನಿಖೆ ಆರಂಭಿಸುತ್ತೇವೆ. ಭಾರತದೊಂದಿಗೆ ಭಯೋತ್ಪಾದನೆ ಬಗ್ಗೆ ಮಾತುಕತೆಗೆ ನಾವು ಸಿದ್ಧ. ಎಲ್ಲ ರೀತಿಯ ತನಿಖೆಗೂ ಸಿದ್ದ. ನಾವು ಕೂಡ ಭಯೋತ್ಪಾದನೆಗೆ ಬಲಿಪಶುವಾಗಿದ್ದೇವೆ. ಪಾಕ್ ಮೇಲೆ ದಾಳಿಯಾದರೂ ನಾವು ಪ್ರತ್ಯುತ್ತರ ನೀಡುತ್ತೇವೆ. ಯುದ್ಧ ಆರಂಭಿಸುವುದು ಸುಲಭ, ಆದರೆ, ಅಂತ್ಯ ಕಷ್ಟ ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ.

ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಪಾಕ್ ಉಗ್ರ ಸಂಘಟನೆಯ ಆತ್ಮಾಹುತಿ ದಾಳಿಗೆ ಭಾರತದ 40 ಯೋಧರು ಮೃತಪಟ್ಟಿದ್ದರು. ಘಟನೆ ನಡೆದ ಬಳಿಕ ಇದೇ ಮೊದಲ ಬಾರಿ ಪಾಕ್ ಪ್ರಧಾನಿ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News