ಐದು ದಿನಗಳ ‘ಏರೋ ಇಂಡಿಯಾ-2019’ ಶೋಗೆ ಚಾಲನೆ

Update: 2019-02-20 05:34 GMT

ಬೆಂಗಳೂರು, ಫೆ.20: ಇಂದಿನಿಂದ ಐದು ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ‘ಏರೋ ಇಂಡಿಯಾ-2019’ ಶೋಗೆ ಇಂದು ಬೆಳಗ್ಗೆ ಚಾಲನೆ ದೊರೆಯಿತು.

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಚಿವೆ, ಶೇ.100 ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿದ ಬಳಿಕ ಭಾರತವು ಹೆಲಿಕಾಪ್ಟರ್ ಸಹಿತ ಲಘು ವಿಮಾನಗಳ ಸಹಿತ 4000 ವಿಮಾನಗಳನ್ನು ತಯಾರಿಸಿದೆ. ರಶ್ಯ, ನೇಪಾಳ, ಮಾರಿಷಸ್ ದೇಶಗಳಿಗೆ ರಕ್ಷಣಾ ಸರಕುಗಳನ್ನು ರಫ್ತು ಮಾಡುತ್ತಿದೆ ಎಂದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಸುರೇಶ್ ಪ್ರಭು ಮಾತನಾಡಿದರು.

ಇದೇ ಸಂದರ್ಭ ‘ಇಂಡಿಯಾ ಏರೋಸ್ಪೇಸ್ ಟೇಕಿಂಗ್ ಆಫ್’, ‘ಟ್ರಯಲ್ ಬ್ಲೇಝರ್’ ಎಂಬ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಉದ್ಘಾಟನೆಗೂ ಮುನ್ನು ಮಂಗಳವಾರ ತಾಲೀಮಿನ ವೇಳೆ ಸೂರ್ಯಕಿರಣ ವಿಮಾನ ಪತನಗೊಂಡು ಮೃತಪಟ್ಟ ಪೈಲಟ್ ಸಾಹಿಲ್ ಗಾಂಧಿಯವರ ಆತ್ಮಕ್ಕೆ ಶಾಂತಿ ಕೋರಿ ವೌನಾಚರಿಸಲಾಯಿತು.

12ನೇ ಆವೃತ್ತಿ ಈ ವೈಮಾನಿಕ ಪ್ರದರ್ಶನದಲ್ಲಿ 600 ಸ್ವದೇಶಿ, 200 ವಿದೇಶಿ ಕಂಪೆನಿಗಳು ಭಾಗವಹಿಸಿವೆ. ಈ ಪ್ರದರ್ಶನದ ಸಂಪೂರ್ಣ ಹೊಣೆಗಾರಿಕೆಯನ್ನು ಹಿಂದೂಸ್ಥಾನ್ ಏರೋನಾಟಿಕ್ಸ್ ಲೀ.(ಎಚ್‌ಎಎಲ್) ವಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News