ಎಚ್1ಎನ್1: ದೇಶದಾದ್ಯಂತ ಮೃತಪಟ್ಟವರ ಸಂಖ್ಯೆ 337ಕ್ಕೆ ಏರಿಕೆ

Update: 2019-02-20 18:35 GMT

ಹೊಸದಿಲ್ಲಿ, ಫೆ. 20: ಕಳೆದ ವರ್ಷ ಎಚ್1ಎನ್1ಗೆ 65 ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಈ ವರ್ಷ ಎಚ್1ಎನ್1ನಿಂದ ಮೃತಪಟ್ಟವರ ಸಂಖ್ಯೆ 377ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ 12 ಸಾವಿರ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಜಸ್ಥಾನದಲ್ಲಿ ಅತ್ಯಧಿಕ 3,508 ಪ್ರಕರಣಗಳು ವರದಿಯಾಗಿದ್ದು, ಹಾಗೂ 127 ಸಾವು ಸಂಭವಿಸಿದೆ. ಎರಡನೇ ಸ್ಥಾನವನ್ನು ಗುಜರಾತ್ ಪಡೆದುಕೊಂಡಿದೆ. ಇಲ್ಲಿ 1,983 ಪ್ರಕರಣಗಳು ವರದಿಯಾಗಿದ್ದು, 71 ಮಂದಿ ಸಾವನ್ನಪ್ಪಿದ್ದಾರೆ.

ದಿಲ್ಲಿಯಲ್ಲಿ 2,278 ಪ್ರಕರಣಗಳು ವರದಿಯಾಗಿದ್ದು, 7 ಮಂದಿ ಮೃತಪಟ್ಟಿದ್ದಾರೆ. ಪಂಜಾಬ್‌ನಲ್ಲಿ 410 ಪ್ರಕರಣಗಳು ವರದಿಯಾಗಿವೆ. 31 ಮಂದಿ ಸಾವನ್ನಪ್ಪಿದ್ದಾರೆ. ಮದ್ಯಪ್ರದೇಶದಲ್ಲಿ 128 ಪ್ರಕರಣಗಳು ವರದಿಯಾಗ್ದಿು, 30 ಸಾವು ಸಂಭವಿಸಿದೆ. ಹಿಮಾಲಚಲಪ್ರದೇಶದಲ್ಲಿ 224 ಪ್ರಕರಣಗಳು ವರದಿಯಾಗಿದ್ದು, 27 ಮಂದಿ ಮೃತಪಟ್ಟಿದ್ದಾರೆ.

ಜಮ್ಮು ಹಾಗೂ ಕಾಶ್ಮೀರದಲ್ಲಿ 293 ಪ್ರಕರಣಗಳು ವರದಿಯಾಗಿದ್ದು, 22 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ 330 ಪ್ರಕರಣಗಳು ವರದಿಯಾಗಿದ್ದು, 17 ಸಾವು ಸಂಭವಿಸಿದೆ. ಹರ್ಯಾಣದಲ್ಲಿ 752 ಪ್ರಕರಣಗಳು ವರದಿಯಾಗಿದ್ದು, 7 ಮಂದಿ ಮೃತಪಟ್ಟಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News