ಆಸ್ಪತ್ರೆ, ಬಂಕರ್ ಗಳನ್ನು ಸಜ್ಜುಗೊಳಿಸುತ್ತಿರುವ ಪಾಕ್

Update: 2019-02-22 06:08 GMT

ಕರಾಚಿ, ಫೆ. 22: ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಗೆ ಭಾರತ ಯಾವುದೇ ಕ್ಷಣದಲ್ಲೂ ಪ್ರತಿಕಾರ ತೀರಿಸಬಹುದೆಂಬ ಭೀತಿಯಲ್ಲಿರುವ ಪಾಕಿಸ್ತಾನ ಗಡಿಯಲ್ಲಿ ಯುದ್ಧಕ್ಕೆ ಸಿದ್ಧತೆಗಳನ್ನು ಆರಂಭಿಸಿದೆ.

ಪಾಕ್ ಆಕ್ರಮಿಕ ಕಾಶ್ಮೀರದಲ್ಲಿ ಹಳೆಯ ಬಂಕರ್ ಗಳನ್ನು ಶುಚಿಗೊಳಿಸಲಾಗುತ್ತಿದೆ. ಆಸ್ಪತ್ರೆಗಳಲ್ಲೂ ಗಾಯಾಳುಗಳ ಚಿಕಿತ್ಸೆಗೆ ತಯಾರಾಗಿರುವಂತೆ ಸೂಚಿಸಲಾಗಿದೆ.

ಬಲೋಚಿಸ್ತಾನದ ಪಾಕ್ ಮಿಲಿಟರಿ ನೆಲೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಸ್ಥಳೀಯಾಡಳಿತಕ್ಕೆ ಪಾಕಿಸ್ತಾನ ಸರಕಾರ ನೋಟಿಸ್ ಜಾರಿಗೊಳಿಸಿದೆ. ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ತಯಾರಾಗಿರುವಂತೆ ಜಿಲಾ ಆಸ್ಪತ್ರಗೆ ಕ್ವೆಟ್ಟಾ ಲಾಜಿಸ್ಟಿಕ್ ಪ್ರದೇಶದಲ್ಲಿರುವ ಪಾಕ್ ಸೇನೆಯ ಪ್ರದಾನ ಕಚೇರಿಯಿಂದ ಬುಧವಾರ ಪತ್ರ ರವಾನೆಯಾಗಿದೆ.

ಈ ನಡುವೆ ಭಾರತದ ಯಾವುದೇ ಒತ್ತಡಕ್ಕೂ ಮಣಿಯದಂತೆ ಉಗ್ರ ಸಂಘಟನೆ ಜೈಷ್ ಎ ಮುಹಮ್ಮದ್ ನ ಮುಖ್ಯಸ್ಥ  ಅಝರ್ ಮುಹಮ್ಮದ್ ಪಾಕ್ ಪ್ರಧಾನಿ ಇಮ್ರಾನ್ ಖಾನ್ ರನ್ನು ಆಗ್ರಹಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News