ಜಮ್ಮು ಜೈಲಿನಲ್ಲಿರುವ 7 ಮಂದಿ ಉಗ್ರರನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸಲು ಸರಕಾರ ಸುಪ್ರೀಂ ಮೊರೆ

Update: 2019-02-22 09:18 GMT

 ಹೊಸದಿಲ್ಲಿ. ಫೆ.22: ಜಮ್ಮು ಜೈಲಿನಲ್ಲಿರುವ 7 ಮಂದಿ ಅಪಾಯಕಾರಿ ಉಗ್ರರನ್ನು ತಿಹಾರ ಅಥವಾ ಇತರ ಜೈಲಿಗೆ ಸ್ಥಳಾಂತರಿಸಲು ಅನುಮತಿ ನೀಡುವಂತೆ ಜಮ್ಮು ಮತ್ತು ಕಾಶ್ಮೀರ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ವಿವಿಧ ಉಗ್ರ ಸಂಘಟನೆಗಳಿಗೆ ಸೇರಿರುವ    ಕೈದಿಗಳು ಬೇರೆ  ಕೈದಿಗಳ ದಿಕ್ಕು ತಪ್ಪಿಸುತ್ತಿದ್ದಾರೆ. ಕೈದಿಗಳನ್ನು ತಮ್ಮ ಸಂಘಟನೆಗಳಿಗೆ ಸೇರಿಸುವ ನಿಟ್ಟಿನಲ್ಲಿ ಅವರಿಗೆ ಉಪದೇಶ ನೀಡುತ್ತಿದ್ದಾರೆ. ಈ ಕಾರಣದಿಂದಾಗಿ ಅವರನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸುವಂತೆ ಸರಕಾರ ಮನವಿ ಮಾಡಿದೆ.

ತಿಹಾರ ಜೈಲಿನಲ್ಲಿ ಸಾಧ್ಯವಿಲ್ಲದಿದ್ದರೆ ಹರ್ಯಾಣ ಮತ್ತು ಪಂಜಾಬ್ ಜೈಲುಗಳಿಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲಾಗಿದೆ ಎಂದು ಸರಕಾರದ ಪರ ವಕೀಲರಾದ ಶುಐಬ್ ಆಲಮ್ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ  ಅರ್ಜಿಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ  ಎಲ್ ಎನ್ ರಾವ್  ಮತ್ತು ಎಂಆರ್ ಶಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ  ಕೇಂದ್ರ ಸರಕಾರ ಮತ್ತು ದಿಲ್ಲಿ ಸರಕಾರದ ಅಭಿಪ್ರಾಯ ಕೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News