ಬ್ಲಾಕ್‌ ಚೈನ್ ತಂತ್ರಜ್ಞಾನ ನಿರುದ್ಯೋಗಿಗಳಿಗೆ ಹೊಸ ಅವಕಾಶ ಕಲ್ಪಿಸಲಿದೆ: ಬೆಂವಿವಿ ಕುಲಪತಿ ಡಾ.ವೇಣುಗೋಪಾಲ್

Update: 2019-02-22 13:04 GMT

ಬೆಂಗಳೂರು, ಫೆ. 22: ಬ್ಲಾಕ್‌ಚೈನ್ ತಂತ್ರಜ್ಞಾನ ಉದ್ಯೋಗ ಅರಸುತ್ತಿರುವವರಿಗೆ ನಿಜಕ್ಕೂ ಉತ್ತಮ ಹಾಗೂ ಹೊಸ ಅವಕಾಶಗಳನ್ನು ಕಲ್ಪಿಸಲಿದೆ ಎಂದು ಬೆಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಎಮುರ್ಗೋ ಅಕಾಡೆಮಿ ಉದ್ಘಾಟಿಸಿ ಮಾತನಾಡಿದ ಅವರು, ಈ ತಂತ್ರಜ್ಞಾನ ಡಾಟಾ, ಕೃತಕ ಬುದ್ದಿಮತ್ತೆ ಲಭಿಸುವುದರಿಂದ ಕೈಗಾರಿಕಾ ವಲಯಕ್ಕೆ ಮುಂದಿನ ವರ್ಷಗಳಲ್ಲಿ ಅಗತ್ಯರುವ ಕೌಶಲ್ಯಪೂರ್ಣ ಸಂಪನ್ಮೂಲ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಭೂಕಂಪನ, ಶಿಕ್ಷಣ, ಆರೋಗ್ಯ ದಾಖಲೆಗಳು ಸೇರಿದಂತೆ ಹಲವು ಕಾರ್ಯಗಳ ನಿರ್ವಹಣೆಗೆ ಈ ಬ್ಲಾಕ್‌ಚೈನ್ ತಂತ್ರಜ್ಞಾನ ಅತ್ಯಗತ್ಯ ಎಂದ ಅವರು, ಕೆಲ ವರ್ಷಗಳಲ್ಲಿ ದೇಶದ ಮಾರುಕಟ್ಟೆಯಲ್ಲಿ ಬ್ಲಾಕ್‌ಚೈನ್ ಡೆವಲಪರ್ ಅಗತ್ಯ ಹೆಚ್ಚಳ ಆಗಿದೆ. ದೇಶದ 4 ಮಿಲಿಯನ್ ಐಟಿ ಉದ್ಯೋಗಿಗಳಲ್ಲಿ 1.5 ಮಿಲಿಯನ್ ಮಂದಿ ಬೆಂಗಳೂರು ಮೂಲದವರು ಎಂದು ಹೇಳಿದರು.

ಅಕಾಡೆಮಿ ಸಿಇಒ ವೆಂಕಟೇಶನ್ ಮಾತನಾಡಿ, ಬ್ಲಾಕ್‌ಚೈನ್ ಅಂತರ್ಜಾಲದಂತೆ ಒಂದು ಪ್ರಮುಖ ಸಾಮಾಜಿಕ ಮೂಲಸೌಕರ್ಯವಾಗಿ ಪರಿವರ್ತನೆಗೊಳ್ಳುತ್ತಿದೆ. ತನ್ನ ಸಂಪರ್ಕದೊಂದಿಗೆ ಜಗತ್ತನ್ನು ಸಕ್ರಿಯಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News