ಭಾರತದ ವಾಯು ಸೀಮೆ ಉಲ್ಲಂಘಿಸಿದ ಪಾಕ್‌ನ 3 ಯುದ್ಧ ವಿಮಾನಗಳು

Update: 2019-02-27 06:04 GMT

ಶ್ರೀನಗರ, ಫೆ.27: ಪಾಕಿಸ್ತಾನದ ಮೂರು ಯುದ್ಧ ವಿಮಾನಗಳು ಭಾರತದ ವಾಯು ಸೀಮೆ ಉಲ್ಲಂಘಿಸಿ ಬಾಂಬು ದಾಳಿ ನಡೆಸಿವೆ ಎಂದು ವರದಿಯಾಗಿದೆ.

ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್‌ನ ಗಡಿ ಪ್ರದೇಶದಲ್ಲಿ ಪಾಕ್ ಯುದ್ಧ ವಿಮಾನಗಳು ಪ್ರವೇಶಿಸಿವೆ. ತಕ್ಷಣವೇ ಎಚ್ಚೆತ್ತುಕೊಂಡಿರುವ ಭಾರತೀಯ ವಾಯುಪಡೆ ಪಾಕ್‌ನ ಎಫ್-16 ವಿಮಾನಕ್ಕೆ ತಕ್ಕ ಉತ್ತರ ನೀಡಿದ್ದು, ಪಾಕ್ ವಿಮಾನಗಳು ಪಲಾಯನ ಮಾಡಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News