ವಾಯು ದಾಳಿ ಎಫೆಕ್ಟ್ : ಭಾರತೀಯ ಸಿನೆಮಾಗಳಿಗೆ ಪಾಕ್ ನಿಷೇಧ

Update: 2019-02-27 09:36 GMT

ಇಸ್ಲಾಮಾಬಾದ್ : ಪಾಕಿಸ್ತಾನದ ಬಾಲಾಕೋಟ್ ಎಂಬಲ್ಲಿನ ಉಗ್ರ ತರಬೇತಿ ಶಿಬಿರದ ಮೇಲೆ ಭಾರತ ನಡೆಸಿದ ವಾಯು ದಾಳಿಯ ನಂತರ ಪಾಕಿಸ್ತಾನದಲ್ಲಿ ಭಾರತದ ಯಾವುದೇ ಚಲನಚಿತ್ರ ಬಿಡುಗಡೆಯಾಗುವುದಿಲ್ಲ ಎಂದು ಅಲ್ಲಿನ ಸರಕಾರ ತಿಳಿಸಿದೆ. ಭಾರತದ ಚಲನಚಿತ್ರಗಳನ್ನು ಪಾಕಿಸ್ತಾನ ಚಿತ್ರ ಪ್ರದರ್ಶಕರ ಸಂಘ ಬಹಿಷ್ಕರಿಸುವುದು ಎಂದು ಅಲ್ಲಿನ ವಾರ್ತಾ ಮತ್ತು ಪ್ರಸಾರ ಸಚಿವ ಚೌಧುರಿ ಫಾವದ್ ಹುಸೈನ್ ತಿಳಿಸಿದ್ದಾರೆ.

"ಮೇಡ್-ಇನ್-ಇಂಡಿಯಾ'' ಜಾಹೀರಾತುಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣಾ ಪ್ರಾಧಿಕಾರಕ್ಕೆ ಸೂಚನೆ ನೀಡಿರುವುದಾಗಿಯೂ ಸಚಿವರು ತಿಳಿಸಿದ್ದಾರಲ್ಲದೆ 'ಪಾಕಿಸ್ತಾನ್‍ತಯಾರ್‍ಹೈ' ಎಂಬ ಹ್ಯಾಶ್ ಟ್ಯಾಗ್ ಉಪಯೋಗಿಸಿ ಟ್ವೀಟ್ ಮಾಡಿದ್ದಾರೆ.

ಪಾಕ್ ಉಗ್ರ ಶಿಬಿರದ ಮೇಲೆ ಭಾರತ ವಾಯು ದಾಳಿ ನಡೆಸಿದ ಬೆನ್ನಲ್ಲೇ ಭಾರತೀಯ ಚಿತ್ರಗಳಾದ "ಟೋಟಲ್ ಧಮಾಲ್'', "ಲುಕಾ ಚುಪ್ಪಿ'', "ಅರ್ಜುನ್ ಪಟಿಯಾಲ", "ನೋಟ್ ಬುಕ್", ಮತ್ತು `ಕಬೀರ್ ಸಿಂಗ್'  ಇವುಗಳ ತಯಾರಕರು ತಮ್ಮ ಚಿತ್ರಗಳನ್ನು ಪಾಕಿಸ್ತಾನದಲ್ಲಿ ಪ್ರದರ್ಶಿಸುವುದಿಲ್ಲ ಎಂದು ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News