ಉದ್ವಿಗ್ನತೆ ಶಮನಗೊಳ್ಳುವುದಾದರೆ ಪೈಲಟ್ ಅನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಪಾಕ್ ಯೋಚಿಸಲಿದೆ: ಖುರೇಷಿ

Update: 2019-02-28 10:59 GMT

ಇಸ್ಲಾಮಾಬಾದ್ :  ತನ್ನ ವಶದಲ್ಲಿರುವ ಭಾರತೀಯ ಪೈಲಟ್ ಅಭಿನಂದನ್ ವರ್ತಮಾನ್ ಅವರ ಬಿಡುಗಡೆಯಿಂದ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಕಡಿಮೆಯಾಗಿ ಶಾಂತಿ ಸ್ಥಾಪನೆಯಾಗುವುದೆಂದಾದರೆ ಪಾಕಿಸ್ತಾನ ಅವರನ್ನು ಭಾರತಕ್ಕೆ ಹಿಂದಿರುಗಿಸುವ ನಿಟ್ಟಿನಲ್ಲಿ ಯೋಚಿಸಲಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹೇಳಿದ್ದಾರೆ.

ಪಾಕಿಸ್ತಾನದ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಖುರೇಷಿ “ಭಾರತವು  ಪಾಕಿಸ್ತಾನದ ಹಂಗಾಮಿ ಹೈಕಮಿಷನರ್ ಗೆ ಡೋಸ್ಸಿಯರ್  ಹಸ್ತಾಂತರಿಸಿದ್ದು ಅದನ್ನು ತೆರೆದ ಮನಸ್ಸಿನಿಂದ ಪರಿಶೀಲಿಸಲಾಗುವುದು ಹಾಗೂ ಅದರ ಕುರಿತಂತೆ ಮಾತುಕತೆಗಳನ್ನು ನಡೆಸಬಹುದೇ ಎಂದು ಯೋಚಿಸಲಾಗುವುದು,'' ಎಂದಿದ್ದಾರೆ.

“ಭಾರತದ ಪ್ರಧಾನಿ ನರೇಂದ್ರ ಮೋದಿ ಸಿದ್ಧರಿದ್ದರೆ ನಮ್ಮ ಪ್ರಧಾನಿ ಇಮ್ರಾನ್ ಖಾನ್ ಅವರ ಜತೆ ಮಾತುಕತೆ ನಡೆಸಲು ಸಿದ್ಧ'' ಎಂದು ಖುರೇಷಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News