ಪಾಕ್ ವಶದಲ್ಲಿರುವ ಭಾರತೀಯ ಪೈಲಟ್ ರ ತಂದೆ ಹೇಳುವುದೇನು ?

Update: 2019-02-28 10:49 GMT

ಹೊಸದಿಲ್ಲಿ : ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯು ಸೇನೆಯ ಯುದ್ಧ ವಿಮಾನದ ಪೈಲಟ್  ಅಭಿನಂದನ್ ವರ್ತಮಾನ್ ಅವರ ತಂದೆ, ಮಾಜಿ ಏರ್ ಮಾರ್ಷಲ್ ಆಗಿರುವ ವರ್ತಮಾನ್ ತಮ್ಮ ಪುತ್ರನ ಸುರಕ್ಷಿತ ವಾಪಸಾತಿಗಾಗಿ ಪ್ರಾರ್ಥಿಸಿದ್ದಾರೆ.
 
"ಸ್ನೇಹಿತರೇ ನಿಮ್ಮ ಕಾಳಜಿ ಮತ್ತು ಹಾರೈಕೆಗಳಿಗಾಗಿ ಧನ್ಯವಾದಗಳು. ದೇವರ ಆಶೀರ್ವಾದಕ್ಕಾಗಿಯೂ ಧನ್ಯವಾದಗಳು. ಅಭಿ ಜೀವಂತವಾಗಿದ್ದಾನೆ, ಗಾಯಾಳುವಲ್ಲ ಹಾಗೂ ಆತನ ಮನೋಸ್ಥಿತಿಯೂ ಚೆನ್ನಾಗಿದೆ. ಆತ ಧೈರ್ಯದಿಂದ ಮಾತನಾಡಿದ ರೀತಿಯನ್ನು ನೋಡಿ, ಒಬ್ಬ ನೈಜ ಜವಾನ... ಆತನ ಬಗ್ಗೆ ನಮಗೆ ಬಹಳಷ್ಟುಹೆಮ್ಮೆಯಿದೆ. ನಿಮ್ಮೆಲ್ಲರ ಆಶೀರ್ವಾದ ಆತನ ಮೇಲಿದೆ. ಆತನಿಗೆ ಹಿಂಸೆ ನೀಡದೇ ಇರಲಿ ಹಾಗೂ ಆತ ಸುರಕ್ಷಿತವಾಗಿ ಮನೆಗೆ ಬರಲಿ ಎಂಬುದೇ ನನ್ನ ಹಾರೈಕೆ. ಇಂತಹ ಒಂದು ಸಂದರ್ಭದಲ್ಲಿ ನಮ್ಮ ಜತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ಬೆಂಬಲವೇ ನಮಗೆ ಶಕ್ತಿ,'' ಎಂದು  ವರ್ತಮಾನ್ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News