ಮಸೂದ್ ಅಝರ್ ಆರೋಗ್ಯ ಹದಗೆಟ್ಟಿದೆ: ಪಾಕ್ ವಿದೇಶಾಂಗ ಸಚಿವ

Update: 2019-03-01 04:50 GMT

ಕರಾಚಿ, ಮಾ.1: ಜೈಶ್-ಇ-ಮುಹಮ್ಮದ್ (ಜೆಇಎಂ)ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ಪಾಕಿಸ್ತಾನದಲ್ಲೇ ಇದ್ದಾನೆ. ಆತನಿಗೆ ಅನಾರೋಗ್ಯ ಕಾಡುತ್ತಿದ್ದು, ಮನೆ ಬಿಟ್ಟು ಹೊರಬರಲೂ ಸಾಧ್ಯವಾಗುತ್ತಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ತಿಳಿಸಿದ್ದಾರೆ.

ಸಿಎನ್‌ಎನ್‌ಗೆ ನೀಡಿದ ಸಂದರ್ಶನವೊಂದಲ್ಲಿ ಖುರೇಷಿ ಈ ಹೇಳಿಕೆ ನೀಡಿದ್ದಾರೆ.

ಜೆಎಎಂ ಮುಖ್ಯಸ್ಥನ ಬಗ್ಗೆ ನನ್ನ ಬಳಿ ಇಷ್ಟು ಮಾತ್ರ ಮಾಹಿತಿಯಿದೆ. ನನ್ನ ಮಾಹಿತಿ ಪ್ರಕಾರ ಆತ ಪಾಕಿಸ್ತಾನದಲ್ಲಿದ್ದು, ಆರೋಗ್ಯ ತುಂಬಾ ಹದಗೆಟ್ಟಿದೆ. ಮನೆಯಿಂದ ಹೊರಹೋಗದ ಸ್ಥಿತಿಯಲ್ಲಿದ್ದಾನೆ ಎಂದು ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಖುರೇಷಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News