ನಮ್ಮದು ಕೇವಲ ಪುರುಷರ ಸಂಘಟನೆ ಎಂದ ಆರೆಸ್ಸೆಸ್ ನಾಯಕ ಕೃಷ್ಣ ಗೋಪಾಲ

Update: 2019-03-01 18:56 GMT

ಹೊಸದಿಲ್ಲಿ,ಮಾ.1: ಆರೆಸ್ಸೆಸ್ ಪುರುಷರ ಸಂಘಟನೆಯಾಗಿದೆ ಎಂದು ಶುಕ್ರವಾರ ಹೇಳಿದ ಸಂಘಟನೆಯ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ ಅವರು,ಆದರೆ ಅದು ಮಹಿಳಾ ವಿರೋಧಿಯಾಗಿದೆ ಎನ್ನುವುದನ್ನು ನಿರಾಕರಿಸಿದರು.

ಮಹಿಳೆಯೋರ್ವರು ಆರೆಸ್ಸೆಸ್ ಮುಖ್ಯಸ್ಥರಾಗಬಹುದೇ ಎಂಬ ಪ್ರಶ್ನೆಗೆ ಕೃಷ್ಣ ಗೋಪಾಲ, “ಗೆಳೆಯರೇ....ಆರೆಸ್ಸೆಸ್ ಪುರುಷರ ಸಂಘಟನೆಯಾಗಿದೆ” ಎಂದು ಉತ್ತರಿಸಿದರು. ಬೆನ್ನಿಗೇ,ಭಾರತೀಯ ಕ್ರಿಕೆಟ್ ತಂಡದಲ್ಲಿ ಎಷ್ಟು ಮಹಿಳೆಯರು ಇದ್ದಾರೆ ಎಂದು ಅವರು ಪ್ರಶ್ನಿಸಿದರು.

ಇಂಡಿಯಾ ಟುಡೇ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು,ಮಹಿಳೆಯರು ಪ್ರತ್ಯೇಕ ಸಂಘಟನೆಗಳನ್ನು ನಡೆಸುತ್ತಾರೆ ಮತ್ತು ಪುರುಷರು ಹಾಗೂ ಮಹಿಳೆಯರು ಒಂದೇ ಗುಂಪಿನಲ್ಲಿ ಇರಬೇಕು ಎಂಬ ಅಗತ್ಯವೇನಿಲ್ಲ ಎಂದರು.

ಆರೆಸ್ಸೆಸ್ ಮಹಿಳಾ ವಿರೋಧಿಯಾಗಿದೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಆರೋಪದ ಕುರಿತು ಪ್ರಶ್ನೆಗೆ ಅವರು, “ಅದು ಹೇಗೆ ಸಾಧ್ಯ?, ಆರೆಸ್ಸೆಸ್ ಸದಸ್ಯರ ಕುಟುಂಬಗಳಲ್ಲಿ ಮಹಿಳೆಯರಿದ್ದಾರೆ ಮತ್ತು ಸಂಪ್ರದಾಯವು ಅವರಿಗೆ ಪೂಜನೀಯ ಸ್ಥಾನವನ್ನು ನೀಡಿದೆ” ಎಂದು ಉತ್ತರಿಸಿದರು.

2017,ಅಕ್ಟೋಬರ್‌ನಲ್ಲಿ ಗುಜರಾತಿನಲ್ಲಿ ಬಹಿರಂಗ ಸಭೆಯೊಂದರಲ್ಲಿ ಮಾತನಾಡಿದ್ದ ವೇಳೆ ರಾಹುಲ್ ಆರೆಸ್ಸೆಸ್‌ ನಲ್ಲಿ ಎಷ್ಟು ಮಹಿಳೆಯರಿದ್ದಾರೆ ಎಂಂದು ಪ್ರಶ್ನಿಸಿದ್ದರು. ‘ಸಂಘದ ಶಾಖೆಗಳಲ್ಲಿ ಚಡ್ಡಿ ಧರಿಸಿದ ಮಹಿಳೆಯರನ್ನು ನೀವು ನೋಡಿದ್ದೀರಾ? ನಾನಂತೂ ನೋಡಿಲ್ಲ’ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News